ದಾವಣಗೆರೆ: ಸಾರ್ವಜನಿಕರು ಜಾತಿ-ಧರ್ಮ, ಹಣದ ಆಮಿಷಗಳಿಗೆ ಬಲಿ ಆಗಿ ಮತ ನೀಡದೇ ಅಭಿವೃದ್ಧಿ ಪರವಾಗಿರುವವರಿಗೆ ಮತ ಚಲಾಯಿಸಿ ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ದಾವಣಗೆರೆ ನಗರದ 20ನೇ ವಾರ್ಡ್‍ನಲ್ಲಿ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ ಹೆಚ್.ಕೆ.ಆರ್.ನಗರದ ವಿವಿಧ ಕ್ರಾಸ್ ಗಳಲ್ಲಿ ಸಿ.ಸಿ.ಚರಂಡಿ, ಉದ್ಯಾನವನ ಅಭಿವೃದ್ಧಿ ಮತ್ತು ಗ್ರಂಥಾಲಯ ನಿರ್ಮಾಣ ಕಾಮಗಾರಿ ಹಾಗೂ 21ನೇ ವಾರ್ಡ್‍ನಲ್ಲಿ ಲೋಕೋಪಯೋಗಿ ಇಲಾಖೆಯಡಿ ಅಣ್ಣಾನಗರದ 1ನೇ ಕ್ರಾಸ್‍ನಲ್ಲಿ ಸಿ.ಸಿ.ಚರಂಡಿ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಬರುವ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಚುನಾವಣೆ ಸಂದರ್ಭದಲ್ಲಿ ಕೆಲವರು ಅಪಪ್ರಚಾರ ನಡೆಸಿ ಓಟು ಗಿಟ್ಟಿಸುವ ಕೆಲಸ ಮಾಡಲಿದ್ದಾರೆ. ಅಂತಹವರಿಗೆ ಮಾನ್ಯತೆ ನೀಡದಂತೆ ಎಚ್ಚರಿಕೆಯಿಂದ ಇದ್ದು, ಅಭಿವೃದ್ಧಿ ಪರ ಇರುವವರಿಗೆ ಮತ ನೀಡುವಂತೆ ಕರೆ ನೀಡಿದರು.
ಮಹಾನಗರ ಪಾಲಿಕೆ ಸದಸ್ಯೆ ಶಿವಲೀಲಾ ಕೊಟ್ರಯ್ಯ, ಮೀನಾಕ್ಷಿ ಜಗದೀಶ್ ಮಾತನಾಡಿ ಶಾಮನೂರು ಶಿವಶಂಕರಪ್ಪನವರು ಶಾಸಕರಾಗಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ನೀಡುವುದರ ಜೊತೆಗೆ ಕೊರೊನಾ ವೇಳೆ ಬಡವರಿಗಾಗಿ ಉಚಿತ ಲಸಿಕೆ ನೀಡಿ ಸಾವಿರಾರು ಜನರ ಜೀವ ಉಳಿಸಿದರು ಎಂದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ವಿಪಕ್ಷ ನಾಯಕ ಜಿ.ಎಸ್.ಮಂಜುನಾಥ್, ಮುಖಂಡರುಗಳಾದ ವೆಂಕಟೇಶ ನಾಯ್ಕ, ಹದಡಿ ನಿಂಗಪ್ಪ, ಗಣೇಶ್ ಹುಲ್ಮನಿ, ಇಟ್ಟಿಗುಡಿ ಮಂಜುನಾಥ್, ರಾಜಶೇಖರ ಗೌಡ್ರು, ಎನ್.ಎಂ.ಕೊಟ್ರಯ್ಯ, ಜಗದೀಶ್, ಹರೀಶ್ ಕೆ.ಎಲ್. ಬಸಾಪುರ, ರೇವಣಸಿದ್ದಯ್ಯ, ಶಿವಣ್ಣ, ಕಡೆಶಪ್ಪ, ಮಲ್ಲೇಶಪ್ಪ, ಪ್ರಭು ಮಾಸ್ಟರ್, ಅರುಣ, ಹನುಮಂತಪ್ಪ, ಸಿ.ಮಹೇಶ್ವರಪ್ಪ, ತಿಪ್ಪೇಶ್, ಗಣೇಶ್,ಮಂಜಪ್ಪ, ರೇಣುಕಮ್ಮ, ಮಂಜುನಾಥ್, ಸೊಸೈಟಿ ವೆಂಕಟೇಶ ನಾಯ್ಕ, ಗುತ್ತಿಗೆದಾರ ರವಿನಾಯ್ಕ, ಹನುಮಂತಪ್ಪ, ಲಕ್ಷ್ಮಮ್ಮ, ಸೀತಮ್ಮ, ಸರೋಜಮ್ಮ, ಲೊಕೋಪಯೋಗಿ ಇಲಾಖೆಯ ಹಾಲಸ್ವಾಮಿ, ಸ್ಮಾರ್ಟ್‍ಸಿಟಿ ನಿರ್ದೇಶಕ ಎಂ.ನಾಗರಾಜ್ ಮತ್ತಿತರರಿದ್ದರು.