ಜಗಳೂರು: ಜಗಳೂರು ವಿಧಾನಸಭಾ ಕ್ಷೇತ್ರದ 22 ಗ್ರಾಪಂಗಳಲ್ಲಿ 2.91ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಉಳಿದಿದೆ. ಗ್ರಾಮ ವಿಕಾಸ ಯೋಜನೆಯಡಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಗ್ರಾಪಂಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿವೆ. ಆದರೆ, ತಾಲೂಕಿನ 22 ಗ್ರಾಪಂಗಳು ವಿದ್ಯುತ್ ಪವರ್ ಬಿಲ್ ಪಾವತಿಸದೆ ನಿರ್ಲಕ್ಷ್ಯ ತೋರಿವೆ.
ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆಯ 7 ಗ್ರಾಪಂಗಳು ಸೇರಿದಂತೆ ಜಗಳೂರು ತಾಲೂಕಿನ ಒಟ್ಟು 22 ಗ್ರಾಪಂಗಳಲ್ಲಿ 2022ನೇ ಸಾಲಿನ ವಿದ್ಯುತ್ ಬಿಲ್ ಪಾವತಿಸದೇ ಮೈಮರೆತಿವೆ. ಹೀಗಾಗಿ 2.91 ಕೋಟಿ ರೂಗಿಂತಲೂ ಹೆಚ್ಚು ಹಣವನ್ನು ಬಾಕಿ ಉಳಿಸಿಕೊಂಡಿವೆ. ಕುಡಿಯುವ ನೀರು ಮತ್ತು ಬೀದಿ ದೀಪ ಸ್ಥಾವರಗಳ ವಿದ್ಯುತ್ ಪಾವತಿಸದೇ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಮೈ ಮರೆತಿದ್ದಾರೆ.
ಬೆಸ್ಕಾಂ ನನೋಟಿಸ್ ಕಳುಹಿಸಿದರೂ ಖ್ಯಾರೇ ಅನ್ನದ ಪಿಡಿಓಗಳು ನಿರ್ಲಕ್ಷ್ಯ ತೋರಿದ್ದಾರೆ. ಬೆಸ್ಕಾಂ ಎಇಇ ಎಚ್.ಗಿರೀಶ್ ನಾಯ್ಕ್ ಅವರು 22 ಗ್ರಾಪಂಗಳಲ್ಲಿ ಬಾಕಿ ಉಳಿಸಿಕೊಂಡಿರುವ ವಿದ್ಯುತ್ ಬಾಕಿ ವಸೂಲಿಗೆ ಮುಂದಾಗಿದ್ದಾರೆ.