ದಾವಣಗೆರೆ: ಅ.11 ರಂದು ಅಂತರಾಷ್ಟ್ರೀಯ ವಿಕೋಪ ಅಪಾಯ ತಗ್ಗಿಸುವಿಕೆ ದಿನಾಚರಣೆ ಅಂಗವಾಗಿ ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ವಿಕೋಪ ನಿರ್ವಹಣಾ ಕೇಂದ್ರ ವಿಕೋಪ ನಿರ್ವಹಣೆಯಲ್ಲಿ ತಂತ್ರಜ್ಞಾನದ ಬಳಕೆ ಮತ್ತು ಉಪಯೋಗಗಳು ವಿಷಯ ಕುರಿತು 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದೆ.
ಸ್ಪರ್ಧಾರ್ಥಿಗಳಿಗೆ ತಮ್ಮ ಪ್ರಬಂಧಗಳನ್ನು ವರ್ಡ್ ಫೈಲ್ ಡಾಕ್ಯುಮೆಂಟ್ ನಲ್ಲಿ ಟೈಪ್ ಮಾಡಿ ಇ-ಮೇಲ್ ಮೂಲಕ atiessaycompetition@gmail.com ಕಳುಹಿಸಬಹುದು. ಕೈ ಬರಹದಲ್ಲಿ ಬರೆದ ಪ್ರಬಂಧಗಳನ್ನು ಮಹಾ ನಿರ್ದೇಶಕರು, ಆಡಳಿತ ತರಬೇತಿ ಸಂಸ್ಥೆ, ಲಲಿತ ಮಹಲ್ ರಸ್ತೆ, ಮೈಸೂರು-570011 ಈ ವಿಳಾಸಕ್ಕೆ ಕಳುಹಿಸಬಹುದು. ಪ್ರಬಂಧಗಳನ್ನು ನ.11 ರ ಸಂಜೆ 5 ಗಂಟೆಯೊಳಗೆ ಕಳುಸಬೇಕಾಗಿದ್ದು, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಪ್ರಬಂಧಗಳಿಗೆ ಪ್ರತ್ಯೇಕ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಗುತ್ತದೆ. ಮೊದಲ ಬಹುಮಾನ-ರೂ.10,000. ದ್ವೀತಿಯ ಬಹುಮಾನ- ರೂ.8,000. ಹಾಗೂ ತೃತೀಯ ಬಹುಮಾನ- ರೂ.5000. ಗಳನ್ನು ಮೈಸೂರಿನಲ್ಲಿ ಆಡಳಿತ ತರಬೇತಿ ಸಂಸ್ಥೆ ಹಮ್ಮಿಕೊಳ್ಳುವ ಕಾರ್ಯಗಾರದಲ್ಲಿ ನೀಡಲಾಗುವುದು.
ಸ್ಪಧಾರ್ಥಿಗಳು ಪ್ರಬಂಧ ಬರೆಯಲು ಸೂಚನೆಗಳನ್ನು ಪಾಲಿಸಬೇಕಿದ್ದು, ಮಾಹಿತಿಯನ್ನು https://atimysore.gov.in ವೆಬ್‍ಸೈಟ್ ನಲ್ಲಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಯೋಜಕರ ಮೊಬೈಲ್ ಸಂಖ್ಯೆ 9740768931, 9901212215 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.



