ದಾವಣಗೆರೆ: ನಗರದ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರ ನಿವಾಸದಲ್ಲಿ ನಟ ದಿ.ಪುನೀತ್ ರಾಜಕುಮಾರ್ ಅವರ ಪ್ರಥಮ ವರ್ಷದ ಪುಣ್ಯ ಸ್ಮರಣೆಯನ್ನು ಆಚರಿಸಲಾಯಿತು.
ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಪುನೀತ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ನಂತರ ಮಾತನಾಡಿ, ಪುನೀತ್ ರಾಜಕುಮಾರ್ ಅವರು ಒಬ್ಬ ಅತ್ಯುತ್ತಮ ಕಲಾವಿದರಾಗಿ ಜೊತೆಗೆ ಎಲೆಮರೆ ಕಾಯಿಯಂತೆ ಸಮಾಜ ಸೇವೆಯಲ್ಲಿ ತೊಡಗಿ ರಾಜ್ಯ ಮತ್ತು ದೇಶದ ಜನಮಾನಸದಲ್ಲಿ ಉಳಿದಿದ್ದಾರೆ. ಅವರ ಸಾವು ರಾಜ್ಯದ ಜನತೆಗೆ ತುಂಬಲಾರದ ನಷ್ಟ ಆಗಿದೆ ಎಂಬುದಕ್ಕೆ ವರ್ಷವಾದರೂ ಅವರನ್ನು ರಾಜ್ಯದ ಜನತೆ ಮರೆತ್ತಿಲ್ಲ. ಯುವಕರು ಪುನೀತ್ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಜು ಎಂದು ಕರೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯುಬ್ ಪೈಲ್ವಾನ್, ಮಹಾನಗರ ಪಾಲಿಕೆ ವಿಪಕ್ಷ ನಾಯಕ ಜಿ.ಎಸ್. ಮಂಜುನಾಥ್, ಸದಸ್ಯರಾದ ಚಮನ್ ಸಾಬ್ , ಗಣೇಶ್ ಹುಲ್ಮನಿ, ಮಹಿಳಾ ಕಾಂಗ್ರೆಸ್ ನ ಸುಷ್ಮಾ ಪಾಟೀಲ್ , ಆಶಾ ರಾಣಿ ಮುರಳಿ, ಶುಭ ಮಂಗಳ , ಗೀತಾ ಚಂದ್ರಶೇಖರ್, ರಾಘವೇಂದ್ರ ಗೌಡ, ಶಾಮನೂರ್ ಕುಮಾರ್ , ಡೋಲಿ ಚಂದ್ರು, ರವಿ ಶಿವಾಜಿ ರಾವ್ , ಶ್ರೀಕಾಂತ್ ಬಗೆರ , ಯುವರಾಜ್ ಮತ್ತಿತರರಿದ್ದರು.



