ದಾವಣಗೆರೆ: ನಿರ್ದೇಶಕ, ನಟ ರಿಷಬ್ ಶೆಟ್ಟಿ ಅವರ ಕಾಂತಾರ ಕನ್ನಡ ಸಿನಿಮಾ ದೇಶದಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಕಾಂತಾರ ಸಿನಿಮಾ ಎಲ್ಲ ಜನವರ್ಗವನ್ನೂ ಆಕರ್ಷಿಸುತ್ತಿದೆ. ಜನ ಕುಟುಂಬ ಸಮೇತರಾಗಿ ಸಿನಿಮಾ ನೋಡುತ್ತಿದ್ದಾರೆ. ಇದೀಗ ದಾವಣಗೆರೆ ಜಿಲ್ಲಾ ಪೊಲೀಸರು ಸಹ ಕುಟುಂಬ ಸಮೇತರಾಗಿ ಕಾಂತಾರ ಸಿನಿಮಾ ವೀಕ್ಷಿಸಿದ್ದಾರೆ.
ನಗರದ ಗೀತಾಂಜಲಿ ಚಿತ್ರಮಂದಿರದಲ್ಲಿ ಇಡೀ ಥಿಯೇಟರ್ನ ಒಂದು ಶೋವನ್ನು ಪೊಲೀಸರು ಬುಕ್ ಮಾಡಿ ಚಲನಚಿತ್ರ ವೀಕ್ಷಿಸಿದ್ದಾರೆ. ಅದರಲ್ಲೂ ಎಸ್ಪಿ ಸಿ.ಬಿ ರಿಷ್ಯಂತ್ ಅವರೇ ಕುಟುಂಬ ಸಮೇತ ಚಿತ್ರ ನೋಡಲು ಬಂದಿದ್ದು ವಿಶೇಷವಾಗಿತ್ತು. ಎಎಸ್ಪಿ, ಡಿವೈಎಸ್ಪಿ, ಸರ್ಕಲ್ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ ಸೇರಿ ಎಲ್ಲರೂ ಬಂದಿದ್ದರು.ಪೊಲೀಸರು ಒತ್ತಡದ ನಡುವೆಯೂ ಬಿಡುವು ಮಾಡಿಕೊಂಡು ಫ್ಯಾಮಿಲಿ ಜತೆಯಾಗಿ ಸಿನಿಮಾ ನೋಡಿದರು.



