ದಾವಣಗೆರೆ: ಜಿಲ್ಲೆಯಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ಕೆರೆ-ಕಟ್ಟೆಗಳು ಉಕ್ಕಿ ಹರಿಯುತ್ತಿವೆ. ಈಗಾಗಲೇ ಹಲವು ಕೆರೆಗಳು ಕೋಡಿ ಬಿದ್ದಿವೆ. ಇದೀಗ ದಾವಣಗೆರೆ ತಾಲೂಕಿನ ಕೊಡಗನೂರಿನ ಕೆರೆ ತುಂಬಿದ್ದು, ಏರಿ ಕುಸಿಯುವ ಅಪಾಯ ಮಟ್ಟಕ್ಕೆ ತಲುಪಿದೆ. ಇದರಿಂದ ಸುತ್ತಮುತ್ತಲಿನ ವಸತಿ ಪ್ರದೇಶ ಮತ್ತು ರೈತರಲ್ಲಿ ಆತಂಕ ಮನೆ ಮಾಡಿದೆ.
ಕೊಡಗನೂರು ಕೆರೆ ಏರಿ ದಾವಣಗೆರೆ – ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕು ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದೆ. ಕೆರೆ ನೀರಿನ ಒತ್ತಡದಿಂದ ಒಂದು ಅಡಿಯಷ್ಟು ಕೆರೆ ಏರಿ ಕುಸಿದಿದೆ. ಇನ್ನು, ಕೆರೆ ಏರಿ ಕುಸಿದ್ರೆ ಲಕ್ಷಾಂತರ ಹೆಕ್ಟೇರ್ ಜಮೀನು, ಮನೆಗಳು ಮುಳುಗಡೆಯಾಗುವ ಸಾಧ್ಯತೆ ಹೆಚ್ಚಿದೆ.
ಕೆರೆ ಏರಿ ಕುಸಿದಿದ್ದರಿಂದ ರಸ್ತೆ ಸಂಚಾರ ಬಂದ್ ಮಾಡಿ ಅಧಿಕಾರಿಗಳು ಮಣ್ಣು ಏರಿಸಿದ್ದಾರೆ. ತಾತ್ಕಾಲಿಕ ಕಾಮಗಾರಿ ಮಾಡದೆ ಕೆರೆ ಏರಿಯನ್ನು ಭದ್ರಪಡಿಸುವಂತೆ ರೈತರು ಆಗ್ರಹಿಸಿದ್ದಾರೆ.



