ದಾವಣಗೆರೆ: ಡಾ.ಕೆ.ಹೆಚ್.ಪಂಚಾಕ್ಷರಪ್ಪ ಅವರ ನಿಧನಕ್ಕೆ ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಕಂಬನಿ ಮಿಡಿದಿದ್ದಾರೆ.ವೃತ್ತಿಯಲ್ಲಿ ವೈದ್ಯರಾಗಿದ್ದರೂ ಪ್ರವತ್ತಿಯಲ್ಲಿ ರಂಗಭೂಮಿ ಕಲಾವಿದರಾಗಿ, ಕನ್ನಡ ಪ್ರೇಮೊಯಾಗಿ ಸಾಂಸ್ಕೃತಿಕ, ಸಾಮಾಜಿಕ, ಸಾಹಿತ್ಯಿಕ ಪರಂಪರೆಗಳನ್ನು ಉಳಿಸಿ ಬೆಳೆಸುವಲ್ಲಿ ಡಾ.ಕೆ.ಹೆಚ್.ಪಂಚಾಕ್ಷರಪ್ಪ ಅವರ ಸೇವೆ ಸದಾ ಸ್ಮರಣೀಯವಾದುದು.
ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿದ್ದ ಡಾ.ಪಂಚಣ್ಣನವರು ಕಲಾ ಸೇವೆಯ ಜೊತೆ ಸಾಮಾಜಿಕ ಸ್ವಾಸ್ಥ್ಯದ ಕುರಿತಾಗಿದ್ದ ಅವರ ಕಾಳಜಿ, ಕನ್ನಡ ನಾಡು-ನುಡಿ, ಕಲೆ-ಸಂಸ್ಕೃತಿಯ ಬಗ್ಗೆ ಅವರಿಗಿದ್ದ ಪ್ರೀತಿಯ ಕಾರಣಕ್ಕಾಗಿ ಅವರನ್ನು ಸಾಂಸ್ಕೃತಿಕ ಲೋಕವು ಸದಾ ಎತ್ತರದ ಸ್ಥಾನದಲ್ಲಿ ಕಾಣುತ್ತಿತ್ತು. ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣಾ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿದ್ದ ಬಿ.ವಾಮದೇವಪ್ಪ ಅವರೊಡನೆ ಡಾ.ಪಂಚಣ್ಣ ಅವರ ಮನೆಗೆ ಹೋದಾಗ ಗಂಟೆಗಟ್ಟಲೆ ಅವರೊಂದಿಗೆ ಹರಟಿದ್ದು, ಅವರ ಆತ್ಮೀಯ ವ್ಯಕ್ತಿತ್ವ ಇವತ್ತಿಗೂ ಹಚ್ಚ ಹಸಿರಾಗಿದೆ.



