ದಾವಣಗೆರೆ: ಉಚಿತ ಕೋವಿಡ್ ಲಸಿಕೆ ನೀಡಿದ ಡಾ. ಶಾಮನೂರು ಶಿವಶಂಕರಪ್ಪ ಅವಗೆ ಸಿರಿ ಕನ್ನಡ ಮನರಂಜನಾ ವಾಹಿನಿ ವತಿಯಿಂದ “ಶ್ರೇಷ್ಠ ಕನ್ನಡಿಗ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇಂದು ಬಿಐಇಟಿ ಕಾಲೇಜಿನ ಎಸ್.ಎಸ್. ಮಲ್ಲಿಕಾರ್ಜುನ್ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ” ಹಾಸ್ಯ ದರ್ಬಾರ್ ” ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಲಾವಿದರಾದ ಗಂಗಾವತಿ ಪ್ರಾಣೇಶ್, ಮುಖ್ಯಮಂತ್ರಿ ಚಂದ್ರು, ನರಸಿಂಹಮೂರ್ತಿ, ಸುಧಾ ಬರಗೂರು, ಮಿಮಿಕ್ರಿ ದಯಾನಂದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.



