ದಾವಣಗೆರೆ: ಕಟ್ಟಡ ನಿರ್ಮಾಣಕ್ಕೆ ಮರ ಕೊಂಬೆ ಅಡ್ಡ ಬಂದಿವೆ ಎಂದು, ಯಾವುದೇ ಅನುಮತಿ ಪಡೆಯದೇ ಮರದ ಕೊಂಬೆಗಳನ್ನು ಕತ್ತರಿಸಿ ಹಾಕುತ್ತಿದ್ದ ಕಟ್ಟಡ ಮಾಲೀಕನ ವಿರುದ್ಧ ಅರಣ್ಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಇಂದು ಕಾನೂನು ಕ್ರಮ ಕೈಗೊಂಡಿದ್ದಾರೆ.
ನಗರದ ರಾಮಂ ಅಂಡ್ ಕೋ ವೃತ್ತದ ಬಳಿ ಖಾಸಗಿ ಕಟ್ಟಡ ಮಾಲೀಕ ಅರಣ್ಯ ಇಲಾಖೆ ಅನುಮತಿ ಪಡೆಯದೇ, ಮರ ಕಡಿಯಲು ಕ್ರೇನ್ ಯಂತ್ರ ಬಳಸಿ ಕೊಂಬೆ ಕಡಿಯುತ್ತಿದ್ದರು. ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿ ಅರಣ್ಯ ಇಲಾಖೆ ಮತ್ತು ಸಂಚಾರ ಬಂದ್ ಮಾಡಿದಕ್ಕೆ ದಾವಣಗೆರೆ ಸಂಚಾರ ಪೊಲೀಸ್ ಇಲಾಖೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮುಸಿದ ಪೊಲೀಸರು ಕ್ರೇನ್ ಮತ್ತು ಮರ ಕಟ್ ಮಾಡಲು ಬಳಸಿದ್ದ ಯಂತ್ರಗಳನ್ನು ವಶಕ್ಕೆ ಪಡೆದಿದ್ದಾರೆ.



