ಬೆಂಗಳೂರು: ದಾವಣಗೆರೆ ಜಿಲ್ಲಾ ರಂಗಮಂದಿರ ವಿನ್ಯಾಸ ಮಾಡಿದ ಎಂಜನಿಯರ್ ಗೆ ವಿಶ್ವೇಶ್ವರಯ್ಯ ಪ್ರಶಸ್ತಿ ನೀಡಿ ಗೌರವಿಸಬೇಕು. ನಾನು ಸಚಿವನಾಗಿದ್ದಾಗ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ರಂಗಮಂದಿರದ ಬದಲು ಗೋಡೌನ್ ವಿನ್ಯಾಸ ಹೊಂದಿದೆ ಮಾಜಿ ಸಚಿವ ಸಿ.ಟಿ. ರವಿ ಹೇಳಿದರು.
ಕಲಾಪದ ಪ್ರಶ್ನೋತ್ತರ ವೇಳೆ ಮಾತನಾಡಿದ ಅವರು, ದಾವಣಗೆರೆ ರಂಗ ಮಂದಿರ ಮೂಲ ಉದ್ದೇಶ ಈಡೇರುವುದಿಲ್ಲ ಎಂದದರು. ಆಗ ರವೀಂದ್ರನಾಥ್ ಅವರು, ದಾವಣಗೆರೆಯಲ್ಲಿ ಗೋಡೌನ್‍ಗಳ ಜಾಸ್ತಿ ಇವೆ. ಅದಕ್ಕೆ ಹಾಗೆ ಮಾಡಿಬೇಕು ಎಂದರು.
ಸಚಿವ ಸುನೀಲ್ ಕುಮಾರ್ ಮಾತನಾಡಿ, ಈ ಬಗ್ಗೆ ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ತೀರ್ಮಾನ ಮಾಡಲಾಗುವುದು. ದಾವಣಗೆರೆ ಜಿಲ್ಲಾ ರಂಗಮಂದಿರ ನಿರ್ಮಾಣಕ್ಕೆ 2010ರಲ್ಲಿ ಮೂರುವರೆ ಕೋಟಿ ರೂ. ಅಂದಾಜು ಮಾಡಲಾಗಿತ್ತು. ನಂತರ ನಾಲ್ಕೂವರೆ ಕೋಟಿಗೆ ಪರಿಸ್ಕರಿಸಲಾಗಿದೆ. ಈಗ ಮತ್ತೆ 8.50 ಕೋಟಿಗೆ ಹೆಚ್ಚಳವಾಗಿದೆ. ಅಂದಾಜು ವೆಚ್ಚದ ಮರುಪರಿಷ್ಕರಣೆಗೆ ಪೂರ್ವಾನುಮತಿ ಪಡೆದಿಲ್ಲ, ರಂಗಮಂದಿರ ಅರ್ಧಕ್ಕೆ ನಿಂತಿದ್ದು, ಅದನ್ನು ಪೂರ್ಣಗೊಳಿಸು ಪ್ರಯತ್ನ ಮಾಡಲಾಗುವುದು ಎಂದರು.



