ದಾವಣಗೆರೆ: ಬೆಲ್‌ಗ್ರೇಡ್ ನಲ್ಲಿ ವಿಶ್ವ ಕುಸ್ತಿ ಚಾಂಪಿಯನ್ ಷಿಪ್ ನಲ್ಲಿ ದಾವಣಗೆರೆ ಕ್ರೀಡಾ ವಸತಿ ನಿಲಯದಲ್ಲಿ ಅಭ್ಯಾಸ ನಡೆಸಿದ ಅರ್ಜುನ್ ಹಲಕುರ್ಕಿ ಭಾರತ ಪ್ರತಿನಿಧಿಸಲಿದ್ದಾರೆ.
ಭಾರತೀಯ ಸೇನೆಯ ಯೋಧ, ಬಾಗಲಕೋಟೆ ಜಿಲ್ಲೆಯ ಬೇವಿನಮಟ್ಟಿಯ ಅರ್ಜುನ್ ಹಲಕುರ್ಕಿ ಅವರು ದಾವಣಗೆರೆ ಕ್ರೀಡಾ ವಸತಿ ನಿಲಯ ನೆಲೆಸಿದ್ದರು. ಅರ್ಜುನ್ ಬೆಲ್‌ಗ್ರೇಡ್‌ನಲ್ಲಿ ಸೆ.10ರಿಂದ 18ರವರೆಗೆ ನಡೆಯಲಿರುವ ಸೀನಿಯರ್ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನ ಗ್ರಿಕೊ ರೋಮನ್ ಸ್ಟೈಲ್‌ನ 55 ಕೆ.ಜಿ.ವಿಭಾಗದಲ್ಲಿ ಭಾರತ ಪ್ರತಿನಿಧಿಸಲಿದ್ದಾರೆ.
ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ಗೆ ಭಾರತದ ಕುಸ್ತಿಪಟುಗಳ ಆಯ್ಕೆಗೆ ಹರಿಯಾಣದಲ್ಲಿ ನಡೆದ ಟ್ರಯಲ್ಸ್ ನಲ್ಲಿ ಅರ್ಜುನ್ ಅವರು ಆಡಿದ ಮೂರು ಪಂದ್ಯಗಳಲ್ಲೂ ಎದುರಾಳಿಗಳನ್ನು ಮಣಿಸುವ ಮೂಲಕ ಅರ್ಹತೆ ಪಡೆದರು.
ಭೋಪಾಲ್‌ನ ಲ್ಲಿ ಹವಾಲ್ದಾರ್ ಆಗಿರುವ ಅರ್ಜುನ್, ಪುಣೆಯ ಸೇನಾ ಕ್ಯಾಂಪ್‌ನಲ್ಲಿ ಅಭ್ಯಾಸ ಮಾಡುತ್ತಿದ್ದರು. ಅರ್ಜುನ್ ಹಲವು ವರ್ಷ ದಾವಣಗೆರೆಯ ಕ್ರೀಡಾ ವಸತಿನಿಲಯದಲ್ಲಿ ಆರ್. ಶಿವಾನಂದ ಅವರಿಂದ ತರಬೇತಿ ಪಡೆದುಕೊಂಡಿದ್ದರು.



