ದಾವಣಗೆರೆ; ಎಸ್.ಎಸ್. ಮಲ್ಲಿಕಾರ್ಜುನ್ ಅಭಿಮಾನಿಗಳ ಬಳಗ ಹಾಗೂ ಕುಹೂ ಕುಹೂ ಕರೋಕೆ ಸಂಸ್ಥೆಯ ಸಹಯೋಗದಲ್ಲಿ ಕನ್ನಡ ಹಾಗೂ ಹಿಂದಿ ಕರೋಕೆ ಗಾಯನ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು, ವಿಜೇತರಿಗೆ ನಟ ಪುನೀತ್ ರಾಜ್ ಕುಮಾರ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಬಳಗದ ನಿರ್ದೇಶಕ ದಿನೇಶ್ ಕೆ. ಶೆಟ್ಟಿ ಹೇಳಿದರು.
ಈ ಸ್ಪರ್ಧೆಯಲ್ಲು ಜನಪ್ರಿಯ ಕನ್ನಡ,ಹಿಂದಿ ಭಕ್ತಿ , ಭಾವ, ಜಾನಪದ ಚಿತ್ರಗೀತೆಗಳನ್ನು ಕರೋಕೆ ಶೈಲಿಯಲ್ಲಿ ಹಾಡಬಹುದು. ಉದಯೋನ್ಮುಖ ಸಂಗೀತಾಸಕ್ತರಿಗೊಂದು ಪ್ರತಿಭೆ ಅನಾವರಣಗೊಳಿಸಿಕೊಳ್ಳಲು ಈ ಸ್ಪರ್ಧೆ ಉತ್ತಮ ವೇದಿಕೆಯಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಚಾಲಕ ಸುರೇಶ್ ಬಾಬು ಮಾತನಾಡಿ, ಸಾಮಾನ್ಯ ಗಾಯನಾಸಕ್ತ ಇಷ್ಟು ವ್ಯವಸ್ಥೆಗಳನ್ನು ಒಗ್ಗೂಡಿಸಿಕೊಂಡು ಸಂಗೀತಾಭ್ಯಾಸ ಮಾಡುವುದು ಸ್ವಲ್ಪ ಕಷ್ಟಸಾಧ್ಯ . ಹಾಗಾಗಿ ಪ್ರಪಂಚದಾದ್ಯಂತ ಸುಲಭ ಮಾರ್ಗವಾದ ಆಧುನಿಕ ತಾಂತ್ರಿಕತೆಯ ಕರೋಕೆ ಶೈಲಿಗೆ ಒಳಪಡಿಸಿಕೊಳ್ಳುವುದರಿಂದ ಹಾಗೂ ಕರೋಕೆ ಶೈಲಿಯಲ್ಲಿ ಬೇಕಾದ ಸಂಗೀತದ ಪಕ್ಕವಾದ್ಯಗಳು ಪರಿಪೂರ್ಣವಿರುವುದರಿಂದ ಕೇಳುಗರಿಗೆ ಒಬ್ಬ ಸಾಮಾನ್ಯ ಗಾಯಕನೂ ಅದ್ಭುತ ಗಾಯಕನಂತೆ ಗೋಚರಿಸುತ್ತಾನೆ . ಇದೇ ಕರೋಕೆ ವೈಶಿಷ್ಟ್ಯತೆ. ಕುಹೂ ಕುಹೂ ದಾವಣಗೆರೆ ಕೋಗಿಲೆ ‘ ಡಾ. ಪುನೀತ್ ರಾಜ್‌ಕುಮಾರ್ ಅವಾರ್ಡ್’ ಎಂಬ ಶೀರ್ಷಿಕೆಯ ಅಡಿಯಲ್ಲಿ ಆಯೋಜಿಸಲಾಗಿದೆ ಎಂದರು.
ಪಾಲಿಕೆ ಸದಸ್ಯ ಎ. ನಾಗರಾಜ್ ಮಾತನಾಡಿ, ಮೊದಲ ಸುತ್ತಿನ ಧ್ವನಿ ಪರೀಕ್ಷೆ ಸೆ.10ರಂದು ಬೆಳಗ್ಗೆ 9 ರಿಂದ 5ರವರೆಗೆ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಜರುಗಲಿದೆ. ದ್ವಿತೀಯ ಸುತ್ತು ಸೆ.11ಕ್ಕೆ ಕುವೆಂಪು ಕನ್ನಡ ಭವನದಲ್ಲಿ ಬೆಳಗ್ಗೆ 9 ರಿಂದ 5ರವರೆಗೆ,ತೃತೀಯ ಧ್ವನಿ ಪರೀಕ್ಷೆಯು ಸೆ.12 ರಂದು ಕುವೆಂಪು ಕನ್ನಡಭವನದಲ್ಲಿ ಬೆಳಗ್ಗೆ 9 ರಿಂದ ಹಾಗೂ ನಾಲ್ಕನೇಯ ಸುತ್ತು ಸೆ.18 ರಂದು ಹರಿಹರದ ಗುರುಭವನದಲ್ಲಿ ಬೆಳಗ್ಗೆ 9ರಿಂದ ಸಂಜೆ ೫ ರವರೆಗೆ ನಡೆಯಲಿದೆ.ನಂತರ ಸೆ.22 ರಂದು ಸಂಜೆ 4 ರಂದು ಜರುಗಲಿದೆ.
ಪ್ರವೇಶ ಪತ್ರಗಳು ಸ್ವೆಟ್ ಪಾರ್ಕ್ ಫಿಟ್ನೆಸ್ ನಲ್ಲಿ ದೊರೆಯಲಿವೆ. ಸ್ಪರ್ಧಿಗಳಿಗೆ ಪ್ರವೇಶ ಶುಲ್ಕ 300 ರೂ ಹಾಗೂ ಕನ್ನಡ ಕರೋಕೆ ಸಿಡಿ ಉಚಿತವಾಗಿ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಸುರೇಶ್ ಬಾಬು ಮೊ; 8660143887 ಸಂಪರ್ಕಿಸಬಹುದು. 8 ವರ್ಷದೊಳಗಿರುವ,16 ವರ್ಷದೊಳಗಿರುವವರು,25ವರ್ಷದೊಳಗಿರುವವರು ಹಾಗೂ 25 ವರ್ಷ ಮೇಲ್ಪಟ್ಟವರು ಭಾಗವಹಿಸಬಹುದಾಗಿದೆ.



