ದಾವಣಗೆರೆ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ನ್ಯೂ ದಾವಣಗೆರೆ ಡಿಸ್ಟ್ರಿಕ್ಟ್ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಮತ್ತು ರೋಟರಿ ಸಂಸ್ಥೆ ದಾವಣಗೆರೆ ದಕ್ಷಿಣ ಸಹಯೋಗದೊಂದಿಗೆ ನಾಳೆ (ಭಾನುವಾರ) ಬೆಳಿಗ್ಗೆ 8 ಘಂಟೆಗೆ ನಗರದ ಗುಂಡಿ ಮಹಾದೇವಪ್ಪ ವೃತ್ತದಿಂದ ಜಯದೇವ ವೃತ್ತದವರೆಗೆ 75 ಸ್ಕೇಟರ್ಸಗಳಿಂದ ರೋಲರ್ ಸ್ಕೇಟಿಂಗ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾಧಿಕಾರಿಕಾರಿಗಳಾದ ಶಿವಾನಂದ ಕಾಪಶಿ ನೆರವೇರಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಅಸಿಸ್ಟೆಂಟ್ ಕಮಿಷನರ್ ಶ್ರೀಮತಿ ಎನ್. ದುರ್ಗಾಶ್ರೀ, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಗಡಿಗುಡಾಳ ಮಂಜುನಾಥ ರವರು ಆಗಮಿಸಲಿದ್ದಾರೆ.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಸಂಸ್ಥೆ ದಾವಣಗೆರೆ ದಕ್ಷಿಣದ ಅಧ್ಯಕ್ಷ ಸಿ.ಕೆ. ರಂಗಪ್ಪ ವಹಿಸಿಲಿದ್ದಾರೆ.
ಇದೆ ಸಂದರ್ಭದಲ್ಲಿ ನ್ಯೂ ದಾವಣಗೆರೆ ಡಿಸ್ಟ್ರಿಕ್ಟ್ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ವತಿಯಿಂದ ಎಲ್ಲಾ ಸ್ಕೇಟರ್ಸಗಳಿಗೂ ಉಚಿತವಾಗಿ ಟಿ-ಶರ್ಟ್ ವಿತರಿಸಲಾಗುವುದು.



