ದಾವಣಗೆರೆ: ಡೆಹ್ರಾಡೂನ್ ಡೂನ್ ಸ್ಕೂಲ್ ನ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ದಾವಣಗೆರೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸೇವೆಗೆ ಅಂಬ್ಯುಲೆನ್ಸ್ ಕೊಡುಗೆಯಾಗಿ ನೀಡಿದರು.
ಹಳೆಯ ವಿದ್ಯಾರ್ಥಿಗಳ ಸಂಘದ ಡಾ. ಸುಹೈಲ್ ಖಾನ್, ಡಿ. ಕೆ. ಸಿಂಗ್ ಅವರು ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಡಾ. ಶಿವಕುಮಾರ್ ಅವರಿಗೆ ಅಂಬ್ಯುಲೆನ್ಸ್ ನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾದ ಉಮೇಶ್ ಶೆಟ್ಟಿ, ಕಾರ್ಯದರ್ಶಿಯಾದ ಡಿ. ಎಸ್. ಸಾಗರ್, ನಿರ್ದೇಶಕರುಗಳಾದ ಇನಾಯತುಲ್ಲಾ, ಡಿ. ಎನ್. ಶಿವಾನಂದ, ಎ. ಜೆ. ರವಿಕುಮಾರ್, ಕೆ. ಕೆ. ನಾಗರಾಜ್, ಗುರುಪ್ರಸಾದ, ಅಮರೇಶ್, ಭರತ್ ಮತ್ತಿತ್ತರು ಉಪಸ್ಥಿತರಿದ್ದರು.