ದಾವಣಗೆರೆ: ಸತ್ತವರ ಹೆಸರಿನಲ್ಲಿ ಉದ್ಯೋಗ ಖಾತ್ರಿ ಕಾರ್ಡ್ ಮಾಡಿ ಲಕ್ಷಾಂತರ ರೂ.ವಂಚನೆ ಮಾಡಿದ ಆರೋಪ ಬಂದ ಹಿನ್ನೆಲೆ ಪಿಡಿಒ ನಾಗರಾಜ್ ಅವರನ್ನು ಅಮಾನತು ಮಾಡಿ, ಜಿ.ಪಂ. ಸಿಇಒ ಚನ್ನಪ್ಪ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ಜಗಳೂರು ತಾಲ್ಲೂಕಿನ ಅಣಬೂರ, ಹನಮಂತಾಪುರ ಗ್ರಾ.ಪಂ. ಪಿಡಿಒ ನಾಗರಾಜ್ ಸತ್ತವರ ಹೆಸರಿನಲ್ಲಿ ಉದ್ಯೋಗ ಖಾತ್ರಿ ಕಾರ್ಡ್ ಮಾಡಿಸಿ ಹಣ ಪಡೆಯುತ್ತಿದ್ದ. 60 ಲಕ್ಷ ರೂಪಾಯಿ ಮೌಲ್ಯದ ಸಾಮಗ್ರಿ ಖರೀದಿ ಮಾಡಿದ್ದು, 32 ಲಕ್ಷ ರೂಪಾಯಿಗೆ ಪಿಡಿಒ ನಾಗರಾಜ್ ಲೆಕ್ಕ ಕೊಟ್ಟಿಲ್ಲ. ಈ ಬಗ್ಗೆ ತನಿಖೆ ಮಾಡಿ ಆರೋಪ ಸಾಬೀತಾದ ಹಿನ್ನೆಲೆ ಅಮಾನತು ಮಾಡಿದ್ದಾರೆ.



