ದಾವಣಗೆರೆ: ನಗರದ ಶ್ರೀ ಸೋಮೇಶ್ವರ ವಿದ್ಯಾಲಯದಲ್ಲಿ 2022ನನೇ ಸಾಲಿನ ಐಎಎಸ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಕ್ಕೆ ಪ್ರಥಮ ಸ್ಥಾನ ಪಡೆದ ದಾವಣಗೆರೆಯ ಅವಿನಾಶ್ ವಿ ರಾವ್ ಅವರಿಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಬಿ.ಸಿ ನಾಗೇಶ್ ಸನ್ಮಾನಿಸಿದರು.
ಅಭಿನಂದನೆಗೆ ಭಾಜನರಾದ ಅವಿನಾಶ್ ಮಾತನಾಡಿ, ಸಾಧನೆ ಎಂಬುದು ಸಾಧಕನ ಸ್ವತ್ತೆ ಹೊರತು ಸೋಮಾರಿಯ ಸ್ವತ್ತಲ್ಲ ಎಂಬ ಸ್ವಾಮಿ ವಿವೇಕಾನಂದರ ಅಮೃತವಾಣಿ ಸ್ಮರಿಸಿದರು. ಶಿಕ್ಷಣ ಸಚಿವರಾದ ಬಿ.ಸಿ ನಾಗೇಶ್ ಮಾತನಾಡಿ, ಸಮುದ್ರವನ್ನೇ ದಾಟಿದ ಜಾಂಬವಂತನನ್ನು ನಾವು ನೀವೆಲ್ಲರೂ ನಮ್ಮ ಜೀವನದಲ್ಲಿ ಸ್ಪೂರ್ತಿದಾಯಕವನ್ನಾಗಿ ಇಟ್ಟುಕೊಂಡು ಜೀವನದಲ್ಲಿ ಮುನ್ನಡೆಯಬೇಕೆಂದು. ಶಿಕ್ಷಣ ಎಂಬುದು ಕೇವಲ ಒಂದು ವೃತ್ತಿಯನ್ನಾಗಿಸಿಲ್ಲ ಇದು ಹಲವು ಕ್ಷೇತ್ರಗಳಲ್ಲಿ ಸೃಷ್ಟಿಸಿರುವ ಒಂದು ಸ್ಪೂರ್ತಿದಾಯಕ ಚಿಲುಮೆ ಎಂದರು.
2021ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶಾಲೆಗೆ ಮೊದಲಾಗಿ ಅಂಕಪಡೆದ ವಿದ್ಯಾರ್ಥಿಗಳಿಗೆ ಅಭಿನಂದಸಿದರು. ಕಾರ್ಯಕ್ರಮದಲ್ಲಿ ಮಾಯಕೊಂಡ ಕ್ಷೇತ್ರದ ಶಾಸಕ ಪ್ರೊ.ಲಿಂಗಣ್ಣ, ಮಾಜಿ ವಿಧಾನ ಪರಿಷತ್ ಸಚೇತಕರಾದ ಶಿವಯೋಗಿಸ್ವಾಮಿ, ಸರ್.ಎಂ.ವಿ ಕಾಲೇಜು ಕಾರ್ಯದರ್ಶಿ ಶ್ರೀಧರ್, ಸೋಮೇಶ್ವರ ಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯದರ್ಶಿ ಹಾಗೂ ಧೂಡ ಅಧ್ಯಕ್ಷ ಕೆ.ಎಂ.ಸುರೇಶ್ ಹಾಗೂ ಪ್ರಾಂಶುಪಾಲರಾದ ಪ್ರಭಾವತಿ, ನಿರ್ದೇಶಕ ಪತ್ರೆಶ್, ಆಡಳಿತಾಧಿಕಾರಿ ಹರೀಶ್ ಬಾಬು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.