ದಾವಣಗೆರೆ: 2022-23ನೇ ಶೈಕ್ಷಣಿಕ ಸಾಲಿಗಾಗಿ ಐ.ಟಿ.ಐ/ಡಿಪ್ಲೋಮಾ/ಇಂಜಿನಿಯರಿಂಗ್ ಪದವಿ ಹೊಂದಿರುವ ಅರ್ಹ ಅಭ್ಯರ್ಥಿಗಳಿಗೆ 01 ವರ್ಷದ ಸಿ.ಐ.ಟಿ.ಎಸ್ ತರಬೇತಿಗೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಪ್ರವೇಶ ಪಡೆಯಲು ಬಯಸುವ ಅಭ್ಯರ್ಥಿಗಳನ್ನು ಅಖಿಲ ಭಾರತ ಸಾಮಾನ್ಯ ಪ್ರವೇಶ ಪರೀಕ್ಷೆ ಮುಖಾಂತರ ಆಯ್ಕೆ ಮಾಡಲಾಗುವುದು. ಅಖಿಲ ಭಾರತ ಸಾಮಾನ್ಯ ಪ್ರವೇಶ ಪರೀಕ್ಷೆ ಜು.17 ರಂದು ನಡೆಸಲಾಗುವುದು. ಆನ್‍ಲೈನ್ ಮುಖಾಂತರ www.nimionlineadmission.in ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜೂ.25 ಕೊನೆಯದಿನವಾಗಿರುತ್ತದೆ. ಐಟಿಓಟಿ ದಾವಣಗೆರೆ ಸಂಸ್ಥೆಯಲ್ಲಿ ಎಲೆಕ್ಟ್ರೀಷಿಯನ್, ಫಿಟ್ಟರ್ ಮತ್ತು ಇ.ಎಮ್ ವೃತ್ತಿಗಳಿಗೆ ಪ್ರವೇಶವಕಾಶವಿದ್ದು, ಆಸಕ್ತ ಅಭ್ಯರ್ಥಿಗಳು ಸದುಪಯೋಗವನ್ನು ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಐಟಿಓಟಿ, ಸರ್ಕಾರಿ ಐ.ಟಿ.ಐ ಆವರಣ ಹದಡಿ ರಸ್ತೆ ದಾವಣಗೆರೆ ದೂ.ಸಂ:08192-260194ನ್ನು ಸಂಪರ್ಕಿಸಬಹುದೆಂದು ಇನ್‍ಸ್ಟಿಟ್ಯೂಟ್ ಫಾರ್ ಟ್ರೈನಿಂಗ್ ಆಫ್ ಟ್ರೈನರ್ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



