ದಾವಣಗೆರೆ: ಮೇ 21 ರಂದು ದಾವಣಗೆರೆ ಜಿಲ್ಲೆಯ ಅಣಜಿ ಹೋಬಳಿ ತುಂಬಿಗೆರೆ ಗ್ರಾಮಕ್ಕೆ ತಹಶೀಲ್ದಾರ್ ಒಳಗೊಂಡಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಭೇಟಿ ನೀಡಿ “ಗ್ರಾಮ ವಾಸ್ತವ್ಯ” ಮಾಡುವರು.
ತುಂಬಿಗೆರೆ ಗ್ರಾಮದ ಸಾರ್ವಜನಿಕರು ತಮ್ಮ ಕುಂದು ಕೊರೆತೆಗಳನ್ನು ಅಹವಾಲುಗಳೊಂದಿಗೆ ಹಾಜರಾಗಿ ಪರಿಹರಿಸಿಕೊಳ್ಳಬಹುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ತಹಶೀಲ್ದಾರ ಬಸವನಗೌಡ ಕೊಟೂರ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



