ದಾವಣಗೆರೆ: ಸರ್ಕಾರದ ಮಹತ್ವಪೂರ್ಣ ನೇರ ಹಣ ಸಂದಾಯ ಯೋಜನೆಯಡಿ (ಡಿಬಿಟಿ) ಪಿಂಚಣಿ ಯೋಜನೆಗಳನ್ನು ತರುವ ನಿಟ್ಟಿನಿಲ್ಲಿ ಇಎಂಓ ಮುಖಾಂತರ ಪಿಂಚಣಿಯನ್ನು ಪಡೆಯುತ್ತಿದ್ದ, ಫಲಾನುಭವಿಗಳನ್ನು ಈಗಾಗಲೇ ಅಂಚೆ ಇಲಾಖೆಯ ಸಹಯೋಗದೊಂದಿಗೆ ಅಂಚೆ ಖಾತೆ ತೆರೆದು ಡಿಬಿಟಿ ಮೂಲಕ ಪಿಂಚಣಿಯನ್ನು ಪಾವತಿಸಲಾಗಿರುತ್ತದೆ. ದಾವಣಗೆರೆ ತಾಲ್ಲೂಕಿಗೆ ಸಂಬಂಧಿಸಿದಂತೆ ಬಾಕಿ ಇರುವ 7201 ಫಲಾನುಭವಿಗಳಿಗೆ ಏಪ್ರಿಲ್-2022ರ ತಿಂಗಳ ಡಿಬಿಟಿ ಮುಖಾಂತರ ಹಣ ಪಾವತಿಸಬೇಕಾಗಿರುವುದರಿಂದ ಫಲಾನುಭವಿಗಳಿಗೆ ರಾಷ್ಟ್ರೀಕೃತ ಬ್ಯಾಂಕ್ ಅಥವಾ ಅಂಚೆ ಇಲಾಖೆಯ ಉಳಿತಾಯ ಖಾತೆ ತೆರೆಯಲು ಸಾರ್ವಜನಿಕರಿಗೆ ಸೂಕ್ತ ಮಾಹಿತಿ ಅಥವಾ ನಿರ್ದೇಶನ ನೀಡಲಾಗಿದೆ.
ಇಎಂಓ ಮುಖಾಂತರ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳು ತಮಗೆ ಹತ್ತಿರವಾಗುವ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆದು ತಮ್ಮ ಮಾಶಾಸನಕ್ಕೆ ಜೋಡಣೆ ಮಾಡಿಕೊಳ್ಳಬಹುದು ಅಥವಾ ರಾಷ್ಟ್ರೀಕೃತ ಬ್ಯಾಂಕ್ ಖಾತೆ ಇದ್ದಲ್ಲಿ ನಾಡಕಚೇರಿ ಅಥವಾ ತಾಲ್ಲೂಕು ಕಚೇರಿಗೆ ಇಎಂಓ ಚೀಟಿ, ಆಧಾರ್ ಪ್ರತಿ ಮತ್ತು ಬ್ಯಾಂಕ್‍ಪಾಸ್ ಪಿಸ್ತಕದ ಪ್ರತಿಗಳನ್ನು ಸಲ್ಲಿಸಿದ್ದಲ್ಲಿ ಜೋಡಣೆ ಮಾಡಲಾಗುವುದು ಎಂಬ ಮಾಹಿತಿಯನ್ನು ಮಾಶಾಸನ ಪಡೆಯುತ್ತಿರುವ ಎಲ್ಲಾ ಫಲಾನುಭವಿಗಳಿಗೆ ಮಾಹಿತಿ ನೀಡಬೇಕೆಂದು ತಹಶೀಲ್ದಾರ್ ಬಸವನಗೌಡ ಕೊಟ್ಟೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



