ಜಗಳೂರು: ಆಕಸ್ಮಿಕ ಬೆಂಕಿಗೆ 12 ಲೋಡ್ ಮೇವಿನ ಬಣವೆ ಸುಟ್ಟು ಭಸ್ಮವಾದ ಘಟನೆ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಹೊರವಲಯದಲ್ಲಿನ ಲಿಂಗಣ್ಣನಹಳ್ಳಿ ರಸ್ತೆ ಸಮೀಪದ ಅಜ್ಜಯ್ಯನ ದೇವಸ್ಥಾನ ಪಕ್ಕದಲ್ಲಿನ ಕಣದಲ್ಲಿಈ ದುರಂತ ಸಂಭವಿಸಿದೆ. ಅಗ್ನಿ ದುರಂತಕ್ಕೆ ನಿರ್ದಿಷ್ಠ ಕಾರಣ ತಿಳಿದು ಬಂದಿಲ್ಲ.
ಸುಮಾರು ಒಂದು ಲಕ್ಷ ಮೌಲ್ಯದ ಮೇವಿನ ಬಣವೆ ಸುಟ್ಟು ಹೋಗಿದೆ. ಪಟ್ಟಣದ ಇಂದಿರಾ ಬಡಾವಣೆ ನಿವಾಸಿ ಪಾಪಜ್ಜರ ತಿಮ್ಮಣ್ಣ ,ರೇವಣ್ಣ ಸಹೋದರರಿಗೆ ಸೇರಿದ ಬಣವೆಯಾಗಿದೆ. ಬೆಳಗಿನ ಜಾವ ಕಣಕ್ಕೆ ಬಂದಾಗ ಬೆಂಕಿ ಕಂಡಿದೆ. ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಷ್ಟರಲ್ಲಿ ಬಣವೆಯೂ ಸಂಪೂರ್ಣ ಸುಟ್ಟು ಹೋಗಿದೆ.ಗುಡುಗು ಸಿಡಿಲು ತಗುಲಿ ಬೆಂಕಿ ಸಂಭವಿಸಿರಬಹುದು. ಇಲ್ಲವೇ ಯಾರೋ ಉದ್ದೇಶ ಪೂರ್ವಕವಾಗಿ ಬೆಂಕಿ ಇಟ್ಟಿದ್ದಾರೋ ಎಂದು ಅನುಮಾನಿಸಲಾಗಿದೆ.



