ದಾವಣಗೆರೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಮಾನಸಿಕ ಆರೋಗ್ಯ ಕಾರ್ಯಕ್ರಮ) ವತಿಯಿಂದ ತೀವ್ರತರವಾದ ಮಾನಸಿಕ ರೋಗಿಗಳ ಮನಶ್ವೇತನಕ್ಕೆ ‘ಡೇ ಕೇರ್ ಸೆಂಟರ್’ (ಮಾನಸಧಾರ) ಸ್ಥಾಪಿಸುವ ಸಲುವಾಗಿ ದಾವಣಗೆರೆ ಜಿಲ್ಲೆಯ ಖಾಸಗಿ ಸಂಸ್ಥೆ ಅಥವಾ ಸ್ವಯಂ ಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಸಂಸ್ಥೆಗಳು ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷ ಅನುಭವ ಹೊಂದಿದ್ದು ಅಧಿಕೃತವಾಗಿ ನೋಂದಣಿಯಾಗಿರಬೇಕು, ಸರ್ಕಾರದ ನಿಬಂಧನೆ ಹಾಗೂ ಮಾರ್ಗಸೂಚಿ ಅನ್ವಯ ಕಾರ್ಯನಿರ್ವಹಿಸಲು ಇಚ್ಚಿಸುವ ಸಂಸ್ಥೆಗಳು ತಮ್ಮ ಇಚ್ಚಾ ಪತ್ರವನ್ನು (Expression of Interest) ದಿನಾಂಕ ಏಪ್ರಿಲ್ 30 ರೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿಗಳ ಕಛೇರಿ, ಎಸ್.ಎಸ್.ಹಾಸ್ಪಿಟಲ್ ಹತ್ತಿರ ಶ್ರೀರಾಮನಗರ ರಸ್ತೆ, ದೂರವಾಣಿ ಸಂಖ್ಯೆ: 9845249646 ಅಥವಾ ಇಮೇಲ್ ವಿಳಾಸ dlodavangere@gmail.com ನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



