ದಾವಣಗೆರೆ: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಪ್ರಧಾನಿ ನರೇಂದ್ರ ಮೋದಿಯೇ ಬಂದು ಸ್ಪರ್ಧೆ ಮಾಡಲಿ ಬಿಡಿ ಎಂದು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆ ಉತ್ತರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸ್ಪರ್ಧಿ ವಿಚಾರ ಕುರಿತು ಕೇಳಿದ ಪ್ರಶ್ನೆಗೆ ಈ ರೀತಿ ಉತ್ತರಿಸಿದರು. ಬಿಜೆಪಿ ಅವರಿಗೆ ಸ್ವಂತ ವರ್ಚಸ್ಸಿನಲ್ಲಿ ಗೆಲ್ಲುವ ಶಕ್ತಿ ಇಲ್ಲ. ಸಂಸದರು ಏನು ಕೆಲಸ ಮಾಡಿಲ್ಲ ಕಿಡಿಕಾರಿದರು.
ನಮ್ಮಪ್ಪಗೆ ಇನ್ನೂ ಸ್ಪರ್ಧೆ ಮಾಡುವ ಶಕ್ತಿ ಇದೆ. ಚುನಾವಣಗೆ ಇನ್ನೂ ಸಮಯ ಇದೆ. ಆಗ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎಂಬುದನ್ನು ನಿರ್ಧರಿಸುತ್ತೇನೆ. ಬಸವರಾಜ ಮೊಮ್ಮಾಯಿಯೇ ಮುಖ್ಯಮಂತ್ರಿ ಆದ ಮೇಲೆ ನಾವು ಆಗರ್ಬಾದ. ನಮ್ಮ ಪಕ್ಷದಲ್ಲಿ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ನೇತೃತ್ವದಲ್ಲಿ ಪಕ್ಷ ಮುನ್ನಡೆಯುತ್ತಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬಹುದು.ಇಲ್ಲವೇ ಹೈಕಮಾಂಡ್ ಸೂಚಿಸಿದವರು ಸಿಎಂ ಆಗ್ತಾರೆ ಎಂದರು.