ದಾವಣಗೆರೆ: ಆಕಸ್ಮಿಕವಾಗಿ ಹೊತ್ತಿದ ಬೆಂಕಿಗೆ ಮೂರು ಕುರಿಗಳು, ಒಂದು ಬೈಕ್, ಭತ್ತದ ಹುಲ್ಲಿನ ಬಣವೆ, ಮರದ ಮುಟ್ಟುಗಳು, ಗೋದಾಮು ಸುಟ್ಟು ಭಸ್ಮವಾದ ಘಟನೆ ನಡೆದಿದೆ. ನೋಡ ನೋಡುತ್ತಿದ್ದಂತೆ ಧಗಧಗಿಸಿದ ಬೆಂಕಿ ಇಡೀ ಪ್ರದೇಶ ವ್ಯಾಪಿಸಿದೆ.
ತಾಲೂಕಿನ ಹದಡಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಗ್ರಾಮದ ರೈತ ಕುಟುಂಬ ಗಿಡ್ಡಜ್ಜರ ಮಲ್ಲಿಕಾರ್ಜು ನಪ್ಪಗೆ ಸೇರಿದ ಗೋದಾಮು, ಮರದ ಮುಟ್ಟು, ಕರಿಮಾಳ್ಳರ ಮಂಜಪ್ಪರ ಕಾಳಗದ ಕುರಿಸೇರಿ 3 ಕುರಿಗಳು, ಎಂ.ಡಿ. ನಿಂಗಪ್ಪಗೆ ಸೇರಿದ ಹುಲ್ಲಿನ ಬಣವೆಗೆ ಸುಟ್ಟು ಹೋಗಿವೆ
ಶನಿವಾರ ಬೆಳಗಿನಜಾವ ಈ ಘಟನೆ ನಡೆದಿದೆ. ಬೆಂಕಿ ಕಂಡ ಗ್ರಾಮಸ್ಥರು ನಂದಿಸಲು ಸಾಕಷ್ಟು ಪ್ರಯತ್ನಿಸಿದರೂ ಬೆಂಕಿ ನಿಯಂತ್ರಣಕ್ಕೆ ಬಂದಿಲ್ಲ. ಕೂಡಲೇ ಅಗ್ನಿ ಶಾಮದ ದಳ ಆಗಮಿಸಿ ಬೆಂಕಿ ನಂದಿಸಿದ್ದಾರೆ.ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಹಶೀಲ್ದಾರ್ ಡಾ.ಅಶ್ವತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬೆಂಕಿ ಅವಘಡದಿಂದಾಗಿ ಕುರಿಗಳ ಕಳೆದುಕೊಂಡವರು, ಮೇವು ಹಾಗೂ ಗೋದಾಮು ಇತರೆ ನಷ್ಟ ಹೊಂದಿದ್ದಾರೆ. ಗ್ರಾಮಸ್ಥರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸಬೇಕೆಂದು ಬಿ.ಎಂ.ಸತೀಶ ಮತ್ತು ಇತರರ ಒತ್ತಾಯಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದರು.ಕಂದಾಯ ನಿರೀಕ್ಷಕ ಬಸವರಾಜಪ್ಪ, ಪಶು ವೈದ್ಯಾಧಿಕಾರಿ ಹೇಮಂತಕುಮಾರ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.ಹದಡಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.