ಜಗಳೂರು: ರಾಜ್ಯದಲ್ಲಿ ನೂತನ ಸಾವಯವ ಕೃಷಿ ಉತ್ತೇಜನ ಕಾರ್ಯಕ್ರಮ ‘ಸಾವಯವ ಸಿರಿ ಯೋಜನೆ’ ಅನುಷ್ಠಾನಗೊಳಿಸಲು ಸಾವಯವ ಕೃಷಿಯಲ್ಲಿ ಸಕ್ರಿಯವಾಗಿ ರೈತರು ತೊಡಗಿಕೊಳ್ಳುವ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದೆ.
ಜಗಳೂರು ತಾಲೂಕಿನ ಸಾವಯವ ಕೃಷಿಕರು ಸಕ್ರಿಯವಾಗಿ ತೊಡಗಿಕೊಂಡಿರುವ ರೈತರು ಅರ್ಜಿ ಸಲ್ಲಿಸಬಹುದು. 10 ವರ್ಷ ಅನುಭವವುಳ್ಳ ಟ್ರಸ್ಟ್/ಸೊಸೈಟಿ ಕಾಯ್ದೆ ಅಡಿ ನೋಂದಾಯಿತ ಸಾವಯವ ಕೃಷಿಕರು ಅಥವಾ ಸಾವಯವ ಸಂಘ, ಒಕ್ಕೂಟಗಳು, ಗುಂಪುಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದೇ ಮಾರ್ಚ್ 30ರ ಒಳಗೆ ಸಾಹಾಯಕ ಕೃಷಿ ನಿರ್ದೇಶಕರ ಕಚೇರಿ ಜಗಳೂರಿಗೆ ಸಲ್ಲಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.