ದಾವಣಗೆರೆ: ಶ್ರೀ ಶುಭಲಕ್ಷ್ಮೀ ಮಹಿಳಾ ಮಂಡಳಿ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಮಹಿಳಾ ಸಂಘ ಸಂಸ್ಥೆಯ ಪದಾಧಿಕಾರಿಗಳಿಗೆ ನಾಯಕತ್ವ ಶಿಬಿರ ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮದ ಉದ್ಘಾಟನೆಯನ್ನು ದಾವಣಗೆರೆ ಜಿಲ್ಲಾ ಪಂಚಾಯತಿ ಮುಖ್ಯ ಲೆಕ್ಕಾಧಿಕಾರಿ ಸೌಮ್ಯ. ಸಿ.ಪಿ. ನೆರವೇರಿಸಿದರು. ಶಿಬಿರರಾರ್ಥಿಗಳಿಗೆ ಡಾ. ಶಶಿಕಲಾ ಕೃಷ್ಣಮೂರ್ತಿ ಅವರು ನಾಯಕತ್ವದ ತರಬೇತಿ ನೀಡಿದರು. ಪದ್ಮಜಾರಾವ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ವಿಜಯ ಅಕ್ಕಿ, ಸುನಂದ ವರ್ಣೇಕರ, ಶಕುಂತಲಾ ಬಸವರಾಜ್, ಪ್ರಸನ್ನ ಚಂದ್ರಪ್ರಭಾ ಅವರನ್ನು ಸನ್ಮಾನಿಸಲಾಯಿತು. ಅಂಬಿಕಾಬಾಯಿ, ಮಂಜುಳಾ. ಐ.ಟಿ, ವಸಂತಬಾಯಿ ಮತ್ತು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.



