ದಾವಣಗೆರೆ: ಯುದ್ಧ ಪೀಡಿತ ಉಕ್ರೇನ್ ದೇಶದಿಂದ ತವರಿಗೆ ವಾಪಸ್ ಬಂದ ವೈದ್ಯಕೀಯ ವಿದ್ಯಾರ್ಥಿಗೆ ಬಿಜೆಪಿ ಬಾವುಟ ಹಿಡಿದು ಸ್ವಾಗತ ಕೋರಿದ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಸೊಕ್ಕೆ ಗ್ರಾಮದಲ್ಲಿ ನಡೆದಿದೆ.
ಸೊಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಸ್ವಾತಿ ತಿಪ್ಪೇಸ್ವಾಮಿ ವಿದ್ಯಾರ್ಥಿಗೆ ಬಿಜೆಪಿ ಬಾವುಟ ಹಿಡಿದು ಸ್ವಾಗತ ಕೋರಿದ್ದಾರೆ. ಸೊಕ್ಕೆ ಗ್ರಾಮದ ಯುವಕ ಆದರ್ಶ್ ಉಕ್ರೇನ್ನಲ್ಲಿ ಎಂಬಿಬಿಎಸ್ ಓದುತ್ತಿದ್ದಾನೆ. ಯುದ್ಧ ಭೂಮಿಯಿಂದ ಆದರ್ಶ್ ಸುರಕ್ಷಿತವಾಗಿ ಇಂದು ಗ್ರಾಮಕ್ಕೆ ಮರಳಿದ್ದಾನೆ. ಈ ವೇಳೆ ಬಿಜಿಪಿ ಬಾವುಟ ಹಿಡಿದು ಸ್ವಾಗತಿಸಿದ್ದಾರೆ. ಬಿಜೆಪಿ ಮುಖಂಡರ ನಡೆಗೆ ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.



