ದಾವಣಗೆರೆ: ಜಿಲ್ಲಾಧಿಕಾರಿಗಳ ಆದೇಶದಂತೆ ನ್ಯಾಮತಿ ಗ್ರಾಮ ಪಂಚಾಯತಿ ದಿನಾಂಕ: 23/12/2020 ರಿಂದ ಪಟ್ಟಣ ಪಂಚಾಯತಿಯಾಗಿ ಕಾರ್ಯ ನಿರ್ವಹಿಸುತ್ತಿರುತ್ತದೆ. ಇದೀಗ ನೂತನ ಪಟ್ಟಣ ಪಂಚಾಯತಿ ತೆರಿಗೆ ದರ ನಿಗದಿ ಮಾಡಿ ಆದೇಶ ಹೊರಡಿಸಲಾಗಿದೆ.
ನಿರ್ದೇಶಕರು ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು, ನ್ಯಾಮತಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳಿಗೆ 2021-22ನೇ ಸಾಲಿನಿಂದ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ನಿಗಧಿಪಡಿಸಿದೆ. ಸರ್ಕಾರದ ಅಧೀನ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ ಬೆಂಗಳೂರು ರವರ ಆದೇಶ ಸಂಖ್ಯೆ ಪುರಸಭೆಗಳ ಅಧಿನಿಯಮ-1964 ರ ಅಧಿನಿಯಮಗಳ ಪ್ರಕಾರ ಪಟ್ಟಣ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಗೃಹಬಳಕೆ/ಗೃಹೇತರಬಳಕೆ/ವಾಣಿಜ್ಯ,ಕೈಗಾರಿಕೆಗಳ ನೀರಿನ ದರಗಳನ್ನು ಜಾರಿಗೊಳಿಸಲಾಗಿದೆ.
ಆಡಳಿತಾಧಿಕಾರಿಗಳು ಹಾಗೂ ತಹಶೀಲ್ದಾರ್ ತನುಜಾ ಟಿ ಸವದತ್ತಿ ಇವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಹೊನ್ನಾಳಿ ಉಪ ನೋಂದಣಾಧಿಕಾರಿಗಳು ವರು ಪ್ರಕಟಿಸಿರುವ ಚಾಲ್ತಿಯಲ್ಲಿರುವ ನಿವೇಶನ ಹಾಗೂ ಕಟ್ಟಡ ನಿರ್ಮಾಣ ವೆಚ್ಚದ ಮಾರುಕಟ್ಟೆ ದರದ ಮೇಲೆ ಶೇ.25% ರಷ್ಟು ಪರಿಗಣಿಸಿಕೊಂಡು ವಾರ್ಡ್‍ವಾರು ಹಾಗೂ ಪ್ರದೇಶವಾರು ಮತ್ತು ರಸ್ತೆವಾರು ಇರುವ ವಾಸೋಪಯೋಗ, ವಾಣಿಜ್ಯ, ಕೈಗಾರಿಕೆ, ಸಾರ್ವಜನಿಕ ಮತ್ತು ವಾಸಯೇತರ ಕಟ್ಟಡಗಳು ಹಾಗೂ ಖಾಲಿ ನಿವೇಶನಗಳಿಗೆ ತೆರಿಗೆ ದರಗಳನ್ನು ನಿಗಧಿಪಡಿಸಿದೆ.
2021-22ನೇ ಸಾಲಿನಿಂದ ಅಂದರೆ ದಿನಾಂಕ: 01-04-2021 ರಿಂದ ಜಾರಿಗೆ ತರಲಾಗಿದೆ. ಸಾರ್ವಜನಿಕರು ಈ ದರಗಳಂತೆ ಆಸ್ತಿ ತೆರಿಗೆಯನ್ನು ಪಾವತಿಸಿ ಪಟ್ಟಣದ ಅಭಿವೃದ್ಧಿಗೆ ಸಹಕರಿಸಲು ಕೋರಿದೆ. ಸ್ವಯಂ ಘೋಷಿತ ಆಸ್ತಿ ತೆರಿಗೆ ದರಗಳು 2021-22 ನೇ ಸಾಲಿಗೆ ನಿಗದಿ ಪಡಿಸಿದ ದರ ಖಾಲಿ ನಿವೇಶನ 0.2%, ವಸತಿ 0.3%, ವಾಣಿಜ್ಯ 0.5%, ಕೈಗಾರಿಕೆ 0.5%, ಸಾರ್ವಜನಿಕ 0.5% 2021-22ನೇ ಸಾಲಿನಿಂದ ನಲ್ಲಿ ಸಂಪರ್ಕಕ್ಕೆ ಮಾಸಿಕ ಗೃಹ ಬಳಕೆಗೆ ರೂ.80, ಗೃಹೇತರ ಬಳಕೆ ರೂ.160, ವಾಣಿಜ್ಯ/ಕೈಗಾರಿಕೆ ಕನಿಷ್ಟ ದರ ರೂ.320 ಇರುತ್ತದೆ ಎಂದು ನ್ಯಾಮತಿ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



