ದಾವಣಗೆರೆ: ಹರಿಹರ ನಗರಸಭೆ ವ್ಯಾಪ್ತಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆಯಡಿ 2021-22 ನೇ ಸಾಲಿಗೆ ರಾಜೀವ್‍ಗಾಂಧಿ ವಸತಿ ನಿಗಮವು ಪರಿಶಿಷ್ಟ ಜಾತಿಯವರಿಗೆ 17 ಹಾಗೂ ಪರಿಶಿಷ್ಟ ಪಂಗಡದವರಿಗೆ 07 ಸೇರಿದಂತೆ ಒಟ್ಟು 24 ಮನೆಗಳ ಗುರಿ. ವಾಜಪೇಯಿ ನಗರ ವಸತಿ ಯೋಜನೆಯಡಿ ಸಾಮಾನ್ಯ ವರ್ಗಕ್ಕೆ 66 ಮತ್ತು ಅಲ್ಪಸಂಖ್ಯಾತರಿಗೆ 10 ಸೇರಿದಂತೆ ಒಟ್ಟು 77 ಮನೆಗಳ ಗುರಿ ನಿಗದಿಪಡಿಸಿದ್ದು. ಅರ್ಜಿ ಸಲ್ಲಿಕೆ ಅವಧಿಯನ್ನು ಫೆ. 25 ರವರೆಗೆ ವಿಸ್ತರಿಸಲಾಗಿದೆ.
ಈ ಮೊದಲು ಅರ್ಜಿ ಸಲ್ಲಿಸಲು ಜ. 31 ಕೊನೆಯ ದಿನವಾಗಿತ್ತು. ಇದೀಗ ಅರ್ಜಿ ಸಲ್ಲಿಕೆ ಅವಧಿಯನ್ನು ಫೆ. 25 ರವರೆಗೆ ವಿಸ್ತರಿಸಲಾಗಿದೆ. ಅರ್ಹರು ಸೂಕ್ತ ದಾಖಲಾತಿಗಳೊಂದಿಗೆ ನಿಗದಿಪಡಿಸಿದ ನಮೂನೆಯಲ್ಲಿ ನಗರಸಭೆಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಖಾಲಿ ನಿವೇಶನ ಹೊಂದಿರಬೇಕು, ಕುಟುಂದ ವಾರ್ಷಿಕ ಆದಾಯ 87600 ರೂ. ಮೀರಿರಬಾರದು. ಗುಡಿಸಲು ವಾಸಿಗಳು, ತಾತ್ಕಾಲಿಕ ಶೇಡ್, ಶಿಥಿಲಗೊಂಡ ಮನೆ, ಕಚ್ಚಾ ಮನೆಗಳಲ್ಲಿ ವಾಸಿಸುತ್ತಿರುವವರು, ಒಂದು ಕೊಣೆಯಿಲ್ಲದ 4ಕ್ಕಿಂತ ಹೆಚ್ಚು ಸದಸ್ಯರುಳ್ಳ ಕುಟುಂಬದವರು ಅರ್ಜಿ ಸಲ್ಲಿಸಲು ಅರ್ಹರು. ಅರ್ಜಿಯೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣಪತ್ರ, ನಗರಸಭೆಯ ಅಸೆಸ್‍ಮೆಮಟ್ 2021-22 ನೇ ಸಾಲಿನ ಖಾತಾ ನಕಲು, ಮತದಾರರ ಗುರುತಿನ ಚೀಟಿ, ಕುಟುಂಬದ ಪಡಿತರ ಚೀಟಿ, ಕುಟುಂಬದ ಪಡಿತರ ಚೀಟಿ, ಕುಟುಂಬ ಸದಸ್ಯರ ಆಧಾರ್ ಕಾರ್ಡ್, ಫೋಟೋ, ಬ್ಯಾಂಕ್ ಖಾತೆ ಪಾಸ್‍ಬುಕ್ ಪ್ರತಿ ಲಗತ್ತಿಸಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕಛೇರಿಯ ಸಮಯದಲ್ಲಿ ಆಶ್ರಯ ಶಾಖೆಯ ವಿಷಯ ನಿರ್ವಾಹಕರನ್ನು ಸಂಪರ್ಕಿಸಬಹುದು ಎಂದು ಹರಿಹರ ಶಾಸಕರು ಹಾಗೂ ನಗರ ಆಶ್ರಯ ಸಮಿತಿ ಅಧ್ಯಕ್ಷರಾದ ಎಸ್. ರಾಮಪ್ಪ ಮತ್ತು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



