ದಾವಣಗೆರೆ: ಕಾನೂನು ಅಧಿನಿಯಮ 2021ರಡಿ ಇನಾಮು ಜಮೀನು ಮಂಜೂರಾತಿಗೆ ಬಾಕಿ ಇರುವ ಪ್ರಕರಣಗಳನ್ನು ಮರು ಮಂಜೂರು ಮಾಡಿಸಿಕೊಳ್ಳಲು ಜ.17 ರಿಂದ ಒಂದು ವರ್ಷದವರೆಗೆ ಅವಧಿ ವಿಸ್ತರಿಸಿ ಸರ್ಕಾರವು ಅಧಿಸೂಚನೆ ಹೊರಡಿಸಿದೆ.
ಈ ಹಿಂದಿನ ಅವಧಿಯಲ್ಲಿ ಅರ್ಜಿ ಸಲ್ಲಿಸಿ ಕಾರಣಾಂತರಗಳಿಂದ ಮರು ಮಂಜೂರಾತಿ ಆದೇಶ ಪಡೆಯಲು ವಿಫಲರಾದ ಭೂ ಮಾಲೀಕರು, ಸರ್ಕಾರವು ವಿಸ್ತರಿಸಿದ ಅವಧಿಯಲ್ಲಿ ತಮ್ಮ ವ್ಯಾಪ್ತಿಯಲ್ಲಿನ ತಾಲ್ಲೂಕು ತಹಶೀಲ್ದಾರರ ಕಚೇರಿಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಮರು ಮಂಜೂರಾತಿ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



