ದಾವಣಗೆರೆ: ಜ.30 ರಂದು ದಾವಣಗೆರೆಯ ಜಿಲ್ಲಾ ಮಾಜಿ ಯೋಧರ ವಿವಿದ್ದೋದ್ದೇಶ ಸಂಘ ದೆಲ್ಲಿ ಸೈನಿಕ ಕಲ್ಯಾಣಾಧಿಕಾರಿಗಳು ಭೇಟಿ ನೀಡಲಿದ್ದು, ಮಾಜಿ ಸೈನಿಕರು, ಅವಲಂಬಿತರ ಕುಂದು ಕೊರತೆ ಆಲಿಕೆ ಸಭೆ ನಡೆಯಲಿದೆ.
ನಗರದ ಚರ್ಚ್ ರಸ್ತೆ, ಎಂ.ಸಿ.ಸಿ ‘ಎ’ ಬ್ಲಾಕ್ ಸೂಪರ್ ಮಾರ್ಕೆಟ್ ಕಾಂಪ್ಲೆಕ್ಸ್ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 01 ರವರೆಗೆ ಸಭೆ ನಡೆಯಲಿದೆ. ದಾವಣಗೆರೆಯ ಮಾಜಿ ಸೈನಿಕರ ಮತ್ತು ಅವರ ಅವಲಂಬಿತರ ಭಾಗವಹಿಸಬಹುದು. ದಾವಣಗೆರೆ ಜಿಲ್ಲೆಯ ಎಲ್ಲಾ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರು ತಮ್ಮ ಕುಂದುಕೊರತೆ ಪರಿಹರಿಸಿಕೊಳ್ಳಬಹುದು ಎಂದು ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.