ದಾವಣಗೆರೆ: ಮಲೇಬೆನ್ನೂರು ಪುರಸಭೆ ವ್ಯಾಪ್ತಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆಯಡಿ 2021-22 ನೇ ಸಾಲಿಗೆ ರಾಜೀವ್‍ಗಾಂಧಿ ವಸತಿ ನಿಗಮವು ಪರಿಶಿಷ್ಟ ಜಾತಿಯವರಿಗೆ 13 ಹಾಗೂ ಪರಿಶಿಷ್ಟ ಪಂಗಡದವರಿಗೆ 05 ಸೇರಿದಂತೆ ಒಟ್ಟು 18 ಮನೆಗಳ ಗುರಿಯನ್ನು ನಿಗದಿಪಡಿಸಿದ್ದು. ಆಸಕ್ತಿವುಳ್ಳ ಅರ್ಹ ಫಲಾನುಭವಿಗಳು ಜ.25 ರ ಒಳಗೆ ಸೂಕ್ತ ದಾಖಲಾತಿಗಳೊಂದಿಗೆ ನಿಗದಿಪಡಿಸಿದ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಹೊಂದಿರಬೇಕಾದ ಅರ್ಹತೆಗಳು: ಖಾಲಿ ನಿವೇಶನ ಹೊಂದಿರಬೇಕು, ಕುಟುಂದ ವಾರ್ಷಿಕ ಆದಾಯ 87600/- ಮೀರಿರಬಾರದು, ಗುಡಿಸಲು ವಾಸಿಗಳು, ತಾತ್ಕಾಲಿಕ ಶೇಡ್, ಶಿಥಿಲಗೊಂಡ ಮನೆ, ಕಚ್ಚಾ ಮನೆಗಳಲ್ಲಿ ವಾಸಿಸುತ್ತಿರುವವರು, ಒಂದು ಕೋಣೆಯಿಲ್ಲದ 4ಕ್ಕಿಂತ ಹೆಚ್ಚು ಸದಸ್ಯರುಳ್ಳ ಕುಟುಂಬದವರು ಮಾತ್ರ ಅರ್ಹರು.ಹೆಚ್ಚಿನ ಮಾಹಿತಿಗಾಗಿ ಕಛೇರಿಯ ಸಮಯದಲ್ಲಿ ಆಶ್ರಯ ಶಾಖೆಯ ವಿಷಯ ನಿರ್ವಾಹಕರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.



