ದಾವಣಗೆರೆ: ನಗರದ ಹೈಸ್ಕೂಲ್ ಮೈದಾನದಲ್ಲಿ ನಿರ್ಮಿಸಿರುವ ತಾತ್ಕಾಲಿಕ ಬಸ್ ನಿಲ್ದಾಣದಲ್ಲಿ ಆಟೋ ನಿಲ್ದಾಣ ನಿರ್ಮಾಣ ಬಗ್ಗೆ ಮೇಯರ್ ಎಸ್.ಟಿ. ವೀರೇಶ್ ಪರಿಶೀಲನೆ ನಡೆಸಿದರು.
ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣವನ್ನು ಹೊಸದಾಗಿ ನಿರ್ಮಾಣ ಹಿನ್ನೆಲೆ ಹೈಸ್ಕೂಲ್ ಮೈದಾನದಲ್ಲಿ ತಾತ್ಕಾಲಿಕ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಸಾರ್ವಜನಿಕರು ಬಸ್ ಇಳಿದ ನಂತರ ಆಟೋದಲ್ಲಿ ಹೋಗಲು ಸೂಕ್ತ ನಿಲ್ದಾಣ ಇಲ್ಲ. ಎವಿಕೆ ರಸ್ತೆಯಲ್ಲಿ ಆಟೋ ನಿಲ್ಲಿಸಿದರೆ ಪೊಲೀಸ್ ನೆರವು ಮಾಡುತ್ತಿದ್ದು,ಆಟೋ ಚಾಲಕ ಮಾಲೀಕ ಸಂಘದವರು ಆಟೋ ನಿಲ್ದಾಣಕ್ಕೆ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿದರು. ಆಟ ಮೈದಾನ ಪಕ್ಕದಲ್ಲಿ ಗ್ರಿಲ್ ಗಳನ್ನು ತೆಗೆದು ಹೈಸ್ಕೂಲ್ ಮೈದಾನದಿಂದ ಪ್ರಯಾಣಿಕರು ಆಟೋ ಹತ್ತಲು ಅವಕಾಶ ಮಾಡಿ ಕೊಡಲಾಗಿತ್ತು.
ಹೈಸ್ಕೂಲ್ ಮೈದಾನ ಕಡೆ ಗೇಟ್ ತಗೆದಿದ್ದರಿಂದ ಸಾರ್ವಜನಿಕರು ಗೋಡೆ ಹಿಂಭಾಗ ಬಂದು ಮೂತ್ರ ವಿಸರ್ಜನೆ ಮಾಡುತ್ತಿದ್ದು, ಇಲ್ಲಿ ಆಟ ಆಡುವರಿಗೆ ಕ್ರೀಡಾಪಟುಗಳು ಮತ್ತು ವಾಯು ವಿಹಾರಿಗಳಿಗೆ ತುಂಬಾ ತೊಂದರೆ ಆಗುತ್ತಿತ್ತು. ಕೂಡಲೇ ಈ ಗೆಟ್ ಮುಚ್ಚಿಸಲು ಸಾರ್ವಜನಿಕರು ಆಗ್ರಹಿಸಿದ್ದರು.

ಈ ಹಿನ್ನೆಲೆಯಲ್ಲಿ ತಾತ್ಕಾಲಿಕ ಆಟೋ ನಿಲ್ದಾಣ ನಿರ್ಮಾಣ ಕುರಿತು ಮೇಯರ್ ಎಸ್.ಟಿ.ವೀರೇಶ್ ಸ್ಥಳ ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ಆಟೋ ಚಾಲಕ ಮತ್ತು ಮಾಲೀಕ ಸಂಘದವರು ಇದ್ದರು.



