ದಾವಣಗೆರೆ: ದಾವಣಗೆರೆ -ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಜೆ.ಎಚ್.ಪಟೇಲ್ ಬಡಾವಣೆಯಲ್ಲಿ 1.80 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.
ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ, ಧೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ್ ಶಂಕುಸ್ಥಾಪನೆ ನೆರವೇರಿಸಿದರು. ಒಟ್ಟು 1.80 ಕೋಟಿ ವೆಚ್ಚದಲ್ಲಿ ಬಡಾವಣೆ ಎ.ಬಿ.ಸಿ.ಡಿ.ಮತ್ತು ಇ ಬ್ಲಾಕ್ ರಸ್ತೆಗಳ ಹೆಸರುಗಳನ್ನು ಸೂಚಿಸುವ ನಾಮಫಲಕ ಅಳವಡಿಸುವುದು. ಶ್ರೀ ದೇವರಾಜ್ ಅರಸು ಬಡಾವಣೆಯಲ್ಲಿ ಪಿ.ಬಿ.ರಸ್ತೆ ಅಭಿಮುಖವಾಗಿ ಕಮಾನ ನಿರ್ಮಿಸುವುದು ಸೇರಿದಂತೆ ಅನೇಕ ಅಭಿವೃದ್ಧಿ ಕಾಮಾಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಧೂಡಾ ಸದಸ್ಯೆ ಗೌರಮ್ಮ ಪಾಟೀಲ್, ಬಾತಿ ಚಂದ್ರಶೇಖರ, ಆರ್ ಲಕ್ಷ್ಮಣ, ಮಾರುತಿರಾವ್ ಘಾಟ್ಗೆ,ಮಹಾನಗರ ಪಾಲಿಕೆ ಸದಸ್ಯ ಕಲ್ಲಹಳ್ಳಿ ನಾಗರಾಜ್, ಆಶಾ ಉಮೇಶ್, ಎನ್.ಎಲ್.ಕಲ್ಲೇಶ್, ಮುರುಗೇಶ್ ಆರಾಧ್ಯ, ಪ್ರಾಧಿಕಾರದ ಆಯಕ್ತ ಬಿ.ಟಿ. ಕುಮಾರಸ್ವಾಮಿ, ಕಾರ್ಯಪಾಲಕ ಅಭಿಯಂತರ ಕೆ.ಎಚ್.ಶ್ರೀಕರ, ಸೃಜಯ್, ಅಕ್ಷತಾ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.