ದಾವಣಗೆರೆ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಶಿವಮೊಗ್ಗದಲ್ಲಿ ಏರ್ಪಡಿಸಿದ್ದ ಮೊದಲನೇ ರಾಜ್ಯಮಟ್ಟದ ಹೆಚ್. ಎನ್. ಪ್ರಶಸ್ತಿಯನ್ನು ಐಸಿಎಆರ್- ತರಳಬಾಳು ಕೃಷಿ ವಿಜ್ಞಾನ (ICAR TKVK) ಕೇಂದ್ರದ ತೋಟಗಾರಿಕೆ ವಿಜ್ಞಾನಿ ಎಂ.ಜಿ.ಬಸವನಗೌಡ ಅವರಿಗೆ ಖ್ಯಾತ ವಿಜ್ಞಾನಿ ಹಾಗೂ ಇಸ್ರೋದ ಮಾಜಿ ಅಧ್ಯಕ್ಷ ಡಾಕ್ಟರ್ ಎಸ್.ಕೆ ಕಿರಣ್ ಕುಮಾರ್ ಅವರು ಪ್ರಧಾನ ಮಾಡಿದರು.
ಎಂ.ಜಿ.ಬಸವನಗೌಡ ಅವರ ಕೃಷಿ ಕ್ಷೇತ್ರದಲ್ಲಿ ರೈತರಿಗೆ ವೈಜ್ಞಾನಿಕ ಸಲಹೆ, ಮುಂಚೂಣಿ ಪ್ರಾತ್ಯಕ್ಷಿಕೆ, ಕ್ಷೇತ್ರ ಪ್ರಯೋಗ, ಕೃಷಿ ಸಾಹಿತ್ಯ ಬರವಣಿಗೆ, ಟಿವಿ ಮತ್ತು ರೇಡಿಯೋದಲ್ಲಿ ಕೃಷಿ ಮಾಹಿತಿ ಸಂದೇಶ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಅವರ ಸಾಧನೆಯನ್ನು ಮೆಚ್ಚಿ ಈ ಗೌರವವನ್ನು ನೀಡಲಾಗಿದೆ.
ಎಂ.ಜಿ.ಬಸವನಗೌಡರಿಗೆ ಕರ್ನಾಟಕ ಯೋಜನಾ ಆಯೋಗದ ಸದಸ್ಯರು ಹಾಗೂ ತರಳಬಾಳು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸದಸ್ಯ ಡಾ. ಕೆ.ಪಿ ಬಸವರಾಜ್, ತರಳಬಾಳು ಕೃಷಿ ವಿಜ್ಞಾನಕೇಂದ್ರದ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥ ಡಾ.ಟಿ. ಎನ್. ದೇವರಾಜ್ ಮತ್ತು ಸಿಬ್ಬಂದಿ ವರ್ಗದವರು, ಜಿಲ್ಲೆಯ ಪ್ರಗತಿಪರ ರೈತರು, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಜಿಲ್ಲಾಘಟಕದ ಅಧ್ಯಕ್ಷ ಡಾ.ಜಗದೀಶ್ ಎಂ. ಆರ್ ಹಾಗೂ ನಿರ್ದೇಶಕ ಡಾ. ಅನಿಲ್ ಕುಮಾರ್ ಶಾಗಲೆ, ಬಿ.ಸಿ ಸಿದ್ದಪ್ಪ, ಕೆ.ಎಂ ರುದ್ರಮುನಿ, ಕೆ.ಸಿ ರಾಜೇಂದ್ರ ಪ್ರಸಾದ್, ಸಿ.ಎಂ ಪ್ರೇಮ ಹಾಗೂ ಇತರರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.