ದಾವಣಗೆರೆ:ಭಾರತರತ್ನ ಪಂ. ಭೀಮಸೇನ್ ಜೋಶಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಡಿಸೆಂಬರ್ 30 ರ ಗುರುವಾರ ಸಂಜೆ 4.30 ಕ್ಕೆ ಶಿವಯೋಗಿ ಮಂದಿರದ ಆವರಣದಲ್ಲಿ ‘ಭೀಮಪಲಾಸ’ ಸಂಗೀತ್ಸೋತ್ಸವ ಹಮ್ಮಿಕೊಳ್ಳಲಾಗಿದೆ.
ದಾವಣಗೆರೆ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಧಾರವಾಡದ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್, ಹುಬ್ಬಳ್ಳಿಯ ಕ್ಷಮತಾ ಸಂಸ್ಥೆಗಳ ವತಿಯಿಂದ ಕಾರ್ಯಕ್ರಮ ಜರುಗಲಿದ್ದು, ಕೇಂದ್ರ ಸರ್ಕಾರದ ಸಂಸ್ಕøತಿ ಇಲಾಖೆ,ಇನ್ಪೋಸಿಸ್ ಪೌಂಡೇಶನ್,ಭಾರತೀಯ ಜೀವ ವಮಾ ನಿಗಮ,ಎಲ್.ಐ.ಸಿ ಹೌಸಿಂಗ್ ಪೈನಾನ್ಸ್, ಸಹಪ್ರಾಯೋಜಕತ್ವ ನೀಡಲಿವೆ. ದಾವಣಗೆರೆ ನಿರ್ಮಿತಿ ಕೇಂದ್ರ, ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್, ಶಶಿ ಸೋಪ್ಸ್, ಜ್ಯುವೆಲ್ಲರಿ ಅಸೋಸಿಯೇಶನ್, ನಲ್ಲೂರು ವಿಜಯಾ ಜ್ಯುವೆಲ್ಲರಿ ಮಾರ್ಟ್ ಹಾಗೂ ಜಿ.ಮಲ್ಲಿಕಾರ್ಜುನಪ್ಪ ಮತ್ತು ಹಾಲಮ್ಮ ಚಾರಿಟೇಬಲ್ ಫೌಂಡೇಶನ್ ಕೈಜೋಡಿಸಿವೆ.
ಸಂಗೀತೋತ್ಸವ ಕಾರ್ಯಕ್ರಮವನ್ನು ಸಂಸದ ಜಿ.ಎಂ. ಸಿದ್ದೇಶ್ವರ ಉದ್ಘಾಟಿಸುವರು, ದಾವಣಗೆರೆ ವಿರಕ್ತ ಮಠ ಶಿವಯೋಗಾಶ್ರಮದ ಬಸವ ಪ್ರಭು ಸ್ವಾಮಿಗಳು ಚರಮೂರ್ತಿಗಳು ಸಾನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ, ಎಸ್.ಎ.ರವೀಂದ್ರನಾಥ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ವಾಮದೇವಪ್ಪ, ಪಾಲಿಕೆ ಮಹಾಪೌರ ಎಸ್.ಟಿ.ವೀರೇಶ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿ.ಪಂ.ಸಿಇಒ ವಿಜಯ ಮಹಾಂತೇಶ ದಾನಮ್ಮನವರ್, ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಗಾನ ಪಂಡಿತ ಎಂ. ವೆಂಕಟೇಶ್ ಕುಮಾರ್, ವಿದುಷಿ ಸಂಗೀತ ಕಟ್ಟಿ ಕುಲಕರ್ಣಿ ಗಾನಸುಧೆ ಹರಿಸಲಿದ್ದಾರೆ. ದಾವಣಗೆರೆಯ ಆನಂದ ಗೌಡ ಪಾಟೀಲ ಸುಗಮ ಸಂಗೀತ ಪ್ರಸ್ತುತ ಪಡಿಸಲಿದ್ದಾರೆ. ಬಸಾಪುರದ ತೋಟಪ್ಪ ಉತ್ತಂಗಿಯವರ ವಚನ ಗಾಯನ ನಡೆಯಲಿದೆ. ಧಾರವಾಡದ ವಿವಿಡ್‍ಲಿಪಿ ಸಂಸ್ಥಯು ಕಾರ್ಯಕ್ರಮದ ನೇರ ಪ್ರಸಾರವನ್ನು http://www.youtube.com/vividlipi/live ಮಾಡಲಿದೆ. ಸಂಗೀತದ ನಿನಾದವನ್ನು ಸವಿಯುವ ರಸಿಕ ಶೋತೃಗಳೆಲ್ಲರೂ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು, ಕೋವಿಡ್‍ನ ಎರಡೂ ಲಸಿಕೆಗಳನ್ನು ಪಡೆದುಕೊಂಡ ಪ್ರಮಾಣ ಪತ್ರಗಳನ್ನು ತೋರಿಸಿದವರಿಗಷ್ಟೇ ಸಂಗೀತೋತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶವಿದೆ ಎಂದು ಪ್ರಕಟಣೆ ತಿಳಿಸಿದೆ.