ದಾವಣಗೆರೆ: ಕೊರೊನಾ ಸೋಂಕು ರಾಜ್ಯದಲ್ಲಿ ಹೆಚ್ಚಳವಾಗುತ್ತಿದೆ. ಸಾರ್ವಜನಿಕರು ಹೆಚ್ಚು ಜಾಗೃತವಾಗಿರಬೇಕಿದ್ದು, ನಿರ್ಲಕ್ಷ್ಯ ವಹಿಸಬೇಡಿ ಎಂದು ಡಿಎಚ್ ಓ ನಾಗರಾಜ್ ಸಾರ್ವಜನಿಕರಿಗೆ ಕರೆ ನೀಡಿದರು.
ಸುಬಿಕ್ಷಾ ಫೌಂಡೇಶನ್ ಭಾನುವಾರ ಸಂಜೆ ಕಾಯಿಪೇಟೆಯಲ್ಲಿ ಆಯೋಜಿಸಿದ್ದ ಕೊರೊನಾ ಜಾಗೃತಿ ಮತ್ತು ಸಂತೆಯಲ್ಲಿ ಸೇರಿದ್ದ ಸಾರ್ವಜನಿಕರಿಗೆ ಮಾಸ್ಕ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೊರೊನಾ ಸೋಂಕು ಇಡೀ ಜಗತ್ತನೇ ತಲ್ಲಣಗೊಳಿಸಿದೆ. ಇದೀಗ ಮತ್ತೆ ಎರಡನೇ ಅಲೆ ಉಂಟಾಗಿದ್ದು, ಮತ್ತೆ ಸೋಂಕು ಏರು ಗತಿಯಲ್ಲಿ ಸಾಗುತ್ತಿದೆ. ಹೀಗಾಗಿ ಎಲ್ಲರು ಸಾಮಾಜಿಕ ಅಂತರ, ಮಾಸ್ಕ್,ಸ್ಯಾನಿಟೈಸರ್ ಹಾಗೂ ಸರ್ಕಾರದ ಮಾರ್ಗ ಸೂಚಿಗಳನ್ನು ಪಾಲಿಸಬೇಕು ಎಂದರು.

ಸುಬಿಕ್ಷಾ ಫೌಂಡೇಶನ್ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮುಂದಾಗಿರುವುದು ಶ್ಲಾಘನೀಯ ಎಂದರು. ಈ ವೇಳೆ ಡಿಎಚ್ ಓ ಸಂತೆಯಲ್ಲಿ ಸಾರ್ವಜಿಕರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿ, ಮಸ್ಕ್ ಗಳನ್ನು ವಿತರಿಸದರು. ಈ ಸಂದರ್ಭದಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಗೋಣೆಪ್ಪ, ಅನಿತಾ ಮಾಲತೇಶ್ ರಾವ್, ಲಕ್ಷ್ಮಿ ರವಿಶಂಕರ್, ಸುಬಿಕ್ಷಾ ಫೌಂಡೇಶನ್ ಕಾರ್ಯದರ್ಶಿ ಸೌಮ್ಯ ಜಾಧವ್, ಸದಸ್ಯರಾದ ಜಯಂತ್, ಆಶಾ, ಸುಮಾ, ಭಾಗ್ಯ ಪಿಸಾಳೆ, ಸೌಂದರ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



