ದಾವಣಗೆರೆ:ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ. ಜಯಪ್ರಕಾಶ ಹೆಗ್ಡೆ ಹಾಗೂ ಆಯೋಗದ ಸದಸ್ಯರುಗಳು ಡಿ.21 ರಿಂದ 23 ರವರೆಗೆ ದಾವಣಗೆರೆ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
ಆಯೋಗವು ಡಿ.21 ರಂದು ಬೆಳಿಗ್ಗೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ 2.30 ಗಂಟೆಗೆ ದಾವಣಗೆರೆ ಪ್ರವಾಸಿ ಮಂದಿರಕ್ಕೆ ಆಗಮಿಸುವರು. ಮಧ್ಯಾಹ್ನ 3 ಗಂಟೆಗೆ ಹರಿಹರ ತಾಲ್ಲೂಕಿನ ಬನ್ನಿಕೋಡು ಮತ್ತು ದಿಟೂರು ಗ್ರಾಮದಲ್ಲಿ ವಾಸವಿರುವ ಪಂಚಮಸಾಲಿ ಸಮುದಾಯದವರ ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಿತಿಗತಿ ಪರಿಶೀಲನೆ ನಡೆಸುವರು. ನಂತರ ಸಂಜೆ 6.30ಕ್ಕೆ ದಾವಣಗೆರೆಗೆ ಹಿಂದಿರುಗಿ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಮಾಡುವರು.
ಡಿ.22 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ತಾಲ್ಲೂಕು ತಹಶೀಲ್ದಾರರು ಹಾಗೂ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳ ಜೊತೆ ಜಿಲ್ಲೆಯಲ್ಲಿರುವ ಪಂಚಮಸಾಲಿ ಸಮುದಾಯದ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಕುರಿತು ಮಾಹಿತಿ ಸಂಗ್ರಹಣೆ ಮತ್ತು ಸಮಾಲೋಚನೆ ನಡೆಸುವರು. ಮಧ್ಯಾಹ್ನ 2.30ಕ್ಕೆ ಜಿಲ್ಲೆಯ ರಾಮತೀರ್ಥ, ಕಮಲಾಪುರ, ಬೇವಿನಹಳ್ಳಿ ಗ್ರಾಮಗಳಲ್ಲಿ ವಾಸವಿರುವ ಪಂಚಮಸಾಲಿ ಸಮುದಾಯದವರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಕುರಿತು ಮಾಹಿತಿ ಸಂಗ್ರಹಣೆ ಮತ್ತು ಸಮಾಲೋಚನೆ ನಡೆಸುವರು.
ಡಿ.23 ರಂದು ಜಿಲ್ಲೆಯ ದೇವರಬೆಳಕೆರೆ, ಗುಡ್ಡದಹಳ್ಳಿ, ಹೊಳೆಸಿರಿಗೆರೆ ಗ್ರಾಮಗಳಲ್ಲಿ ವಾಸವಿರುವ ಪಂಚಮಸಾಲಿ ಸಮುದಾಯದವರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಕುರಿತು ಮಾಹಿತಿ ಸಂಗ್ರಹಣೆ ಮತ್ತು ಸಮಾಲೋಚನೆ ನಡೆಸುವರು. ಸಂಜೆ 6 ಗಂಟೆಗೆ ಆಯೋಗದ ಅಧ್ಯಕ್ಷರು ಕುಂದಾಪುರಕ್ಕೆ ತೆರಳಿದರೆ, ಆಯೋಗದ ಸದಸ್ಯರು ಬೆಂಗಳೂರಿಗೆ ತೆರಳುವರು ಎಂದು ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.



