ಹರಿಹರ: ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನು ಶಾಸಕ ಎಸ್. ರಾಮಪ್ಪ ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಸೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ತಡರಾತ್ರಿ ಶಾಸಕ ರಾಮಪ್ಪ ಕೊಮಾರನಹಳ್ಳಿಯಿಂದ ಹರಿಹರಕ್ಕೆ ಆಗಮಿಸುವ ಸಂದರ್ಭದಲ್ಲಿ ಬೆಳ್ಳೂಡಿ ಬಳಿ ಟ್ರಾಕ್ಟರ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿ ಅಪಘಾತವಾಗಿತ್ತು. ಗಾಯಗೊಂಡಿದ್ದ ವ್ಯಕ್ತಿಯನ್ನು ಕೂಡಲೇ ತಮ್ಮ ಸ್ವಂತ ವಾಹನದಲ್ಲಿ ಹರಿಹರದ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿ ತಮ್ಮ ಮಾನವೀಯತೆ ಮೆರೆದರು. ಅಪಘಾತಗೊಂಡ ವ್ಯಕ್ತಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಶಾಸಕರು ವೈದ್ಯರಿಗೆ ಸೂಚಿಸಿದರು.



