ದಾವಣಗೆರೆ: ರಿದ್ಧಿ ಸಿದ್ಧಿ ಫೌಂಡೇಶನ್ ರಾಯಭಾರಿಯಾಗಿ ರಿಧಿ ಯಾದವ್ ಆಯ್ಕೆಯಾಗಿದ್ದಾರೆ.
ಶಾಸಕ ಶಾಮನೂರು ಶಿವಶಂಕರಪ್ಪ ಅವರು ರಿಧಿ ಯಾದವ್ ಅವರಿಗೆ ಸನ್ಮಾನಿಸಿ, ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ವಿಪಕ್ಷ ನಾಯಕರಾದ ಎ. ನಾಗರಾಜ್, ಫೌಂಡೇಶನ್ ಅಧ್ಯಕ್ಷರಾದ ವಿಜಯಕುಮಾರ್, ಕಾರ್ಯದರ್ಶಿಯಾದ ರಾಜು ಭಂಡಾರಿ, ಕಾಂಗ್ರೆಸ್ ಮುಖಂಡರಾದ ಕೆ.ಜಿ. ಶಿವಕುಮಾರ್, ಅಯೂಬ್ ಪೈಲ್ವಾನ್, ಯುವ ಮುಖಂಡ ಶ್ರೀಕಾಂತ್ ಬಗರೆ, ನಫೀಜ್ ಶೇಖ್, ಕಾರ್ತಿಕ, ಮಹಮ್ಮದ್ ಗೌಸ್ ಉಪಸ್ಥಿತರಿದ್ದರು.



