ದಾವಣಗೆರೆ: ಕರ್ನಾಟಕದ ನಂಬಿಯಾರ್ ಗುರುಸ್ವಾಮಿ ಎಂದೇ ಖ್ಯಾತಿ ಹೊಂದಿದ್ದ ನಟ ಶಿವರಾಮ್ ಗುರುಸ್ವಾಮಿ ನಿಧನಕ್ಕೆ ದಾವಣಗೆರೆ ಜಿಲ್ಲಾ ಅಯ್ಯಪ್ಪ ಸೇವಾ ಸಮಿತಿ ಹಾಗೂ ಭಾರತೀಯ ಅಯ್ಯಪ್ಪ ಸೇವಾ ಸಂಘ ಹಾಗೂ ಪುಣ್ಯ ಪುಂಗವನ ಸದಸ್ಯರು ಸಂತಾಪ ಸೂಚಿಸಿದ್ದಾರೆ.
ಶಿವರಾಮ್ ಗುರುಸ್ವಾಮಿ ಅವರು ಇಂದು ನಮ್ಮನ್ನು ಆಗಲಿರುವುದು ತೀವ್ರ ದುಃಖ ತಂದಿದೆ. ದಾವಣಗೆರೆ ಜಿಲ್ಲೆಯ ಎಲ್ಲಾ ಅಯ್ಯಪ್ಪ ಮಾಲಾಧಾರಿಗಳಿಂದ ನಮನ ಸಲ್ಲಿಸುತ್ತೇವೆ. ಕರ್ನಾಟಕದ ಹಿರಿಯ ಸ್ವಾಮಿ ಶಿವರಾಮ್ ಗುರುಸ್ವಾಮಿ ಇನ್ನಿಲ್ಲ ಎನ್ನುವ ಸುದ್ದಿ ಎಲ್ಲಾ ಮಲಾಧಾರಿಗಳಿಗೆ ನೋವುಂಟು ಮಾಡಿದೆ ಎಂದು ತಿಳಿಸಿದ್ದಾರೆ.
.