ದಾವಣಗೆರೆ: ನಗರದಲ್ಲಿ ಹೊಸದಾಗಿ ಡ್ಯಾಪ್ ಲೋಕಲ್ ಡೆಲಿವರಿ ಸರ್ವಿಸ್ ಆ್ಯಪ್ ಆರಂಭವಾಗಿದ್ದು, ಅತ್ಯಂತ ಕಡಿಮೆ ಸರ್ವಿಸ್ ಚಾರ್ಜ್ ನಲ್ಲಿ ಸಾಮಗ್ರಿಗಳನ್ನು ಮನೆಬಾಗಿಲಿಗೆ ತಲುಪಿಸಲಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾರ್ಕೆಟಿಂಗ್ ಹೆಡ್ ವಿನಾಯಕ್ ಭೋವಿ, ದಾವಣಗೆರೆ ಯುವಕರು ಜೊತೆಗೂಡಿ ಹೊಸದಾಗಿ ಡ್ಯಾಪ್ ಆ್ಯಪ್ ಆರಂಭಿಸಿದ್ದು, ಇದು ಒಂದು ಹೈಪರ್ ಲೋಕಲ್ ಡೆಲಿವರಿ ಸರ್ವಿಸ್ ಆಗಿದೆ. ಇದು ಜನರ ದಿನನಿತ್ಯದ ಬೇಡಿಕೆಯನ್ನು ಹಾಗೂ ಅವಶ್ಯಕತೆಗಳನ್ನು ಪೂರೈಸಲಿದೆ ಎಂದರು.
ದಿನನಿತ್ಯದ ಆವಶ್ಯ ವಸ್ತುಗಳಾದ ಆಹಾರ , ತರಕಾರಿಗಳು ಹಾಗೂ ಹಣ್ಣುಗಳು , ದಿನಸಿ ವಸ್ತುಗಳು , ಮೀನು , ಮಾಂಸ ಪ್ಯಾಕೇಜ್ ಡೆಲಿವರಿ, ಸಾಕುಪ್ರಾಣಿಗಳ ಆಹಾರ , ಸಾವಯುವ ಕೃಷಿ ಉತ್ಪನ್ನಗಳು ಮತ್ತು ಇತರೆ ಅಗತ್ಯ ವಸ್ತುಗಳನ್ನು 30 ನಿಮಿಷಗಳಲ್ಲಿ ತಲುಪಿಸಲಾಗುವುದು. ಸ್ಥಳೀಯ ವ್ಯಾಪಾರಿಗಳಿಗಾಗಿ ನಮ್ಮ ಆಪ್ – ದಿಲ್ ಸೆ ಡೆಲಿವರಿ ತುಂಬ ಅನುಕೂಲಕರವಾಗಿದ್ದು , ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ತಲುಪಲು ಒಂದು ಒಳ್ಳೆಯ ವೇದಿಕೆ ಕಲ್ಪಿಸಿಕೊಡಲಾಗಿದೆ . ಇದರಿಂದ ವ್ಯಾಪಾರಿಗಳು ಆನ್ ಲೈನ್ ಹಾಗೂ ಸ್ಥಳೀಯ ಗ್ರಾಹಕರನ್ನು ತಲುಪುವ ಮುಖಾಂತರ ಹೆಚ್ಚಿನ ಆದಾಯ ಗಳಿಸಲು ಪೂರಕವಾಗಿದೆ ಎಂದರು. ಈ ಸಂದರ್ಭದಲ್ಲಿ ಆಕಾಶ್,ಭರತ್,ಸಂತೋಷ್ ಇದ್ದರು.



