ಪ್ರಗತಿಪರ ಹೋರಾಟಗಾರರು ಚುನಾವಣೆಗೆ ಸ್ಪರ್ಧಿಸಿದ್ರೆ ಅಪ್ನಾ ಭಾರತ್‌ ಮೋರ್ಚಾ ಬೆಂಬಲ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ದಾವಣಗೆರೆ: ಹೋರಾಟಗಾರರೂ ಸೇರಿದಂತೆ ಯಾರೂ ಚುನಾವಣಾ ರಾಜಕೀಯದಿಂದ ವಿಮುಖರಾಗಬಾರದು. ಚುನಾವಣೆಯ ಮೂಲಕವೇ ಜನವಿರೋಧಿಗಳಿಗೆ ಪಾಠ ಕಲಿಸಬೇಕು. ಹೀಗಾಗಿ ಸಮಾಜವಾದಿ ಅಧ್ಯಯನ ಕೇಂದ್ರ, ಅಪ್ನಾ ಭಾರತ್ ಮೋರ್ಚಾ ಮತ್ತು ಪ್ರಗತಿಪರ ಒಕ್ಕೂಟಗಳ ಯಾವುದೇ ಸದಸ್ಯರು ಚುನಾವಣಾ ಕಣಕ್ಕೆ ಇಳಿದರೆ ನಾವು ಬೆಂಬಲಿಸುತ್ತೇವೆ ಎಂದು ಅಪ್ನಾ ಭಾರತ್‌ ಮೋರ್ಚಾದ ರಾಷ್ಟ್ರೀಯ ಸಂಚಾಲಕ ಅಶೋಕ್‌ ತನ್ವರ್‌, ರಾಜ್ಯ ಸಂಚಾಲಕ ಪ್ರಕಾಶ್‌ ಕಮ್ಮರಡಿ ಹೇಳಿದರು.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಪಕ್ಷಗಳು ಆಮಿಷ, ಜಾತಿ ರಾಜಕಾರಣ ಮಾಡಿಕೊಂಡು ಬಂದಿವೆ. ಅದಕ್ಕಿಂತ ಭಿನ್ನವಾಗಿ ರಾಜಕೀಯವಾಗಿ ಯೋಚಿಸುವ ಕ್ರಿಯೆಯನ್ನು ಅಪ್ನಾ ಭಾರತ್‌ ಮೋರ್ಚಾ ಮಾಡಲಿದೆ. ಸಂವಿಧಾನದ ಎಲ್ಲ ಆಶಯಗಳನ್ನು ಇಟ್ಟುಕೊಂಡು ಗುರುತಿಸುವಿಕೆ, ಬಹುತ್ವ ಮತ್ತು ಗೌರವ ಎಂಬ ಮೂರಂಶಗಳನ್ನು ಸೇರಿಸಿಕೊಂಡು ಅಪ್ನಾ ಭಾರತ್‌ ಮೋರ್ಚಾ ಚುನಾವಣಾ ರಾಜಕೀಯದಲ್ಲಿ ಸಕ್ರಿಯವಾಗಲಿದೆ ಎಂದು ತಿಳಿಸಿದರು.

ಚಳವಳಿ, ಹೋರಾಟಗಳಷ್ಟೇ ಗುರಿ ಸಾಧಿಸಲು ಸಾಕಾಗುವುದಿಲ್ಲ. ಇದರ  ಜತೆ ರೈತರ, ಜನಸಾಮಾನ್ಯರ, ಹೋರಾಟಗಾರರ ಆಶಯಗಳನ್ನು ಜಾರಿ ಮಾಡುವ ಸರ್ಕಾರವೂ ಇರಬೇಕು. ಅದಕ್ಕೆ ಚುನಾವಣಾ ರಾಜಕೀಯ ಅಗತ್ಯ. ಈಗ ಆಡಳಿತ ನಡೆಸುತ್ತಿರುವ ಸರ್ಕಾರಗಳ ಬಗ್ಗೆ ಜನರಿಗೆ ಇರುವ ನೋವು, ಆಕ್ರೋಶಗಳು ಚುನಾವಣೆಯಲ್ಲಿ ಮತವಾಗಿ ಪರಿವರ್ತನೆಗೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಪ್ರಗತಿಪರ ಹೋರಾಟಗಾರ ತೇಜಸ್ವಿ ವಿ.ಪಟೇಲ್, ನವದೆಹಲಿಯ ಜಾಮೀಯಾ ಮಿಲಿಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಿ.ಕೆ.ಗಿರಿ, ನಿವೃತ್ತ ಪ್ರಾಧ್ಯಾಪಕ ಡಾ. ಎ.ಬಿ.ರಾಮಚಂದ್ರಪ್ಪ, ಪ್ರಗತಿಪರ ಹೋರಾಟಗಾರ ಅನೀಸ್ ಪಾಷ, ಅಂಜನಪ್ಪ ಇದ್ದರು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *