ದಾವಣಗೆರೆ: ಸಮಾಜದಲ್ಲಿರುವ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬದಿಗೊತ್ತಿ ‘ವೀರಶೈವ ಲಿಂಗಾಯತರು’ ನಾವೆಲ್ಲ ಒಂದೇ ಎಂಬುದನ್ನು ಮನನ ಮಾಡಿಕೊಳ್ಳಬೇಕಯ. ಇದನ್ನು ಸಮಾಜ ಬಾಂಧವರಿಗೂ ತಿಳಿ ಹೇಳಬೇಕು . ಇದಲ್ಲದೆ, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಅತಿ ಹೆಚ್ಚು ಸದಸ್ಯತ್ವವನ್ನು ಮಾಡಿಸಿ ಸಮಾಜವನ್ನು ಸದೃಢಗೊಳಿಸಬೇಕೆಂದು ಪದಾಧಿಕಾರಿಗಳಿಗೆ ಜಿಲ್ಲಾಧ್ಯಕ್ಷ ಐಗೂರು ಸಿ ಚಂದ್ರಶೇಖರ್ ಕರೆಕೊಟ್ಟರು.
ದಾವಣಗೆರೆ: ಪ್ರಾಡಕ್ಟ್ ರಿವ್ಯೂವ್ ನೀಡಿದ್ರೆ
ಕಮಿಷನ್ ನೀಡುವ ಆಮಿಷ; 39.36ಲಕ್ಷ ವಂಚನೆ
ಎಂಬಿಎ ಕಾಲೇಜು ಆವರಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ದಾವಣಗೆರೆ ಜಿಲ್ಲಾ ಘಟಕದಿಂದ ಸದಸ್ಯತ್ವ ನೋಂದಣಿ ಕಾರ್ಯಗಾರದಲ್ಲಿ ಮಾತನಾಡಿದರು. ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರೇಣುಕಾ ಪ್ರಸನ್ನ ಆಗಮಿಸಿ ಮಾರ್ಗದರ್ಶನ ನೀಡಿದರು. ರಾಷ್ಟ್ರೀಯ ಉಪಾಧ್ಯಕ್ಷ ಅಣಬೇರು ರಾಜಣ್ಣ ಮಾತನಾಡಿ, ಸಮಾಜದವರು ಸಂಘಟಿತರಾಗುವುದು ಅನಿವಾರ್ಯ. ಸಮಾಜಕ್ಕೆ ಮಂಜೂರಾಗಿರುವ ನಿವೇಶನದಲ್ಲಿ ಕಟ್ಟಡ ಕಟ್ಟುವ ಬಗ್ಗೆ ಚರ್ಚೆ ನಡೆಸಿದರು.
ಮಂದಿನ ಐದು ದಿನ ರಾಜ್ಯದಲ್ಲಿ ಭಾರಿ ಚಳಿ ವಾತಾವರಣ | ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ
ಗೌರವಾಧ್ಯಕ್ಷ ಎಸ್ ಜಿ ಉಳುವಯ್ಯ, ರಾಜ್ಯ ಘಟಕದ ಕಾರ್ಯದರ್ಶಿ ಎಂ.ಜಿ ಶಶಿಕಲಾ ಮೂರ್ತಿ ಹಾಗೂ ನಿರ್ದೇಶಕ ಸಂದೀಪ್ ಅಣಬೇರು ರಾಜ್ಯ ಯುವ ಘಟಕದ ನಿರ್ದೇಶಕ ನಿಧಿರಾಜ ಐನಳ್ಳಿ ಉಪಸ್ಥಿತರಿದ್ದರು.
ಪ್ರತಿ ರೈತರಿಂದ ಮೆಕ್ಕೆಜೋಳ ಖರೀದಿ ಮಿತಿ 20 ಕ್ವಿಂಟಲ್ ನಿಂದ 50 ಕ್ವಿಂಟಲ್ ಗೆ ಹೆಚ್ಚಳ
ಜಿಲ್ಲಾ ಘಟಕದ ಪದಾಧಿಕಾರಿ ಚನ್ನಗಿರಿಯ ಉಮೇಶ್ ಕುಮಾರ್ ನಿರೂಪಣೆ ಮಾಡಿದರು ಜಗಳೂರು ತಾಲೂಕಿನ ಎ. ಒ. ನಾಗರತ್ನಮ್ಮ ಸ್ವಾಗತ ಮಾಡಿದರು. ದಾವಣಗೆರೆ ನೀತ ನಂದೀಶ್ ಬಳ್ಳಾರಿ ವಂದನಾರ್ಪಣೆ ಮಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅವಿನಾಶ್ ಬಸವರಾಜ್ , ಜಿಲ್ಲಾ ಮಹಿಳಾ ಘಟಕ, ನಗರ ಘಟಕ ಮತ್ತು ಜಿಲ್ಲೆಯಲ್ಲಿನ ಎಲ್ಲಾ ತಾಲೂಕು ಘಟಕಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.



