ದಾವಣಗೆರೆ: ಈಗಾಗಲೇ ಪೆಟ್ರೋಲ್, ಡಿಸೇಲ್ ಬೆಲೆ ಕಡಿಮೆಯಾಗಿದ್ದು, ಮುಂದಿನ ದಿನಗಳಲ್ಲಿ ಅಡುಗೆ ಎಣ್ಣೆ ದರ ಕೂಡ ಕಡಿಮೆ ಆಗಲಿದೆ. ಹೀಗಾಗಿ ತೈಲ ಬೆಲೆ ಏರಿಕೆ ಬಗ್ಗೆ ವೈಭವೀಕರಣ ಮಾಡುವುದನ್ನು ಬಿಡಿ ಎಂದು ಸಂಸದ ಜಿಎಂ ಸಿದ್ದೇಶ್ವರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಡುಗೆ ಎಣ್ಣೆ ದರ ಬಗ್ಗೆ ನನಗೂ ಗೊತ್ತಿದೆ. ನಮ್ಮನೆಯಲ್ಲಿ ಸಹ ಅಡಿಗೆ ಮಾಡುತ್ತೇವೆ. ಇಷ್ಟರಲ್ಲಿಯೇ ಅಡಿಗೆ ಎಣ್ಣೆ ಬೆಲೆ ಸಹ ಕಡಿಮೆ ಆಗುತ್ತದೆ. ಬೆಲೆ ಹೆಚ್ಚಾದ ತಕ್ಷಣ ವೈಭವೀಕರಣ ಮಾಡುವುದು ಬಿಡಿ. ಈಗಾಗಲೇ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡಿದ್ದಾರೆ. ಅಡುಗೆ ಎಣ್ಣೆ ದರ ಸಹ ಕಡಿಮೆ ಆಗುತ್ತೆ ಕಾದು ನೋಡಿ ಎಂದರು.



