ದಾವಣಗೆರೆ: ಎಸ್.ಟಿ.ಪಿ.ಐ, ಇಂಟೆಲ್ ಕಂಪನಿ ಹಾಗೂ ವಿಷನ್ ದಾವಣಗೆರೆ ಸಂಯುಕ್ತಾಶ್ರಯದಲ್ಲಿ ವಿವಿಧ ಕೋರ್ಸ್‍ಗಳ ಇಂಜಿನಿಯರಿಂಗ್ ಮತ್ತು ಎಂ.ಸಿ.ಎ, ಬಿ.ಸಿಎ ವಿದ್ಯಾರ್ಥಿಗಳಿಗಾಗಿ ಅಕ್ಟೋಬರ್ 15 ಮತ್ತು 16 ರಂದು ಕೃತಕ ಬುದ್ದಿಮತ್ತೆ ಭವಿಷ್ಯದ ಕಾರ್ಯಪಡೆ ಕುರಿತು ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ.
ಆನ್ ಲೈನ್ ನೋಂದಣಿ
ಅಕ್ಟೋಬಬರ್ 15 ರಂದು ಬೆಳಗ್ಗೆ 10 ಗಂಟೆಗೆ ಬಿಐಇಟಿ ಆವರಣದ ಎಂಇ ಬ್ಲಾಕ್, ನಾಲ್ಕನೇ ಮಹಡಿಯ ಪ್ಲೇಸ್‍ಮೆಂಟ್ ಸೆಮಿನಾರ್ ಹಾಲ್‍ನಲ್ಲಿ ನಡೆಯಲಿದ್ದು ಆಸಕ್ತರುhttps;//rb.gy/2efs3a ಲಿಂಕ್ ಮೂಲಕ ನೊಂದಣಿ ಮಾಡಿಕೊಳ್ಳಬಹುದು. ಮತ್ತು ಅ.16 ರಂದು ಬೆಳಗ್ಗೆ 10 ಗಂಟೆಗೆ ಬಿಐಇಟಿ ಎಸ್.ಎಸ್.ಎಂ. ಸಾಂಸ್ಕøತಿಕ ಸಭಾಂಗಣದಲ್ಲಿ ಕಾರ್ಯಗಾರ ನಡೆಯಲಿದೆ. ಆಸಕ್ತ ವಿದ್ಯಾರ್ಥಿಗಳು https;//h1.nu/1cAOA ಲಿಂಕ್ ಮೂಲಕ ನೊಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದ್ದಾರೆ.