ದಾವಣಗೆರೆ: ವಿಕಲಚೇತನರು ಹಾಗೂ ಹಿರಿಯ ನಾಗರಿಕರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಲೋಕಸಭಾ ಸದಸ್ಯೆ ಡಾ; ಪ್ರಭಾ ಮಲ್ಲಿಕಾರ್ಜುನ ತಿಳಿಸಿದರು.
ಸದ್ಯೋಜಾತ ಮಠದಲ್ಲಿ ವಿಕಲಚೇತರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಅಲಿಂಕೋ ಸಂಸ್ಥೆ ಹಾಗೂ ಎಸ್.ಎಸ್ ಕೇರ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ವಿಕಲಚೇತನರು ಹಾಗೂ ಹಿರಿಯ ನಾಗರಿಕರುಗಳಿಗೆ ಸಾಧನಾ ಸಲಕರಣೆಗಳ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಿರಿಯ ನಾಗರಿಕರು ಹಾಗೂ ವಿಕಲಚೇತನರಿಗೆ ಅವಶ್ಯವಿರುವ ಊರುಗೋಲು, ಶ್ರವಣ ಸಾಧನ, ದೃಷ್ಠ್ಠಿದೋಷವುಳ್ಳವರಿಗೆ ಮೊಬೈಲ್ ಪೋನ್, ತ್ರಿಚಕ್ರ ಸೈಕಲ್ , ಬ್ಲೈಂಡ್ ಸ್ಟೀಕ್ ಮತ್ತು ವ್ಹೀಲ್ ಚೇರ್ ಗಳನ್ನು ವಿತರಿಸುವ ಸಲುವಾಗಿ ಸೆಪ್ಟೆಂಬರ್ 10 ರಂದು ಪಲಾನುಭವಿಗಳನ್ನು ಆಯ್ಕೆ ಮಾಡಲು ಶಿಬಿರವನ್ನು ಅಯೋಜಿಸಲಾಗಿತ್ತು. ಶಿಬಿರದಲ್ಲಿ ಭಾಗವಹಿಸಿದ್ದ ವಿಕಲಚೇತನರು ಹಾಗೂ ಹಿರಿಯ ನಾಗರಿಕರನ್ನು ಇಲಾಖೆಯ ವೈದ್ಯರು ಪರಿಶೀಲಿಸಿ ಅರ್ಹ 232 ವಿಕಲಚೇತನರು ಇವರಿಗೆ 19.87 ಲಕ್ಷ ರೂ.ಗಳ ವೆಚ್ಚದಲ್ಲಿ ಹಾಗೂ 101 ಹಿರಿಯ ನಾಗರಿಕರು ಇವರಿಗೆ 8.95 ಲಕ್ಷಗಳ ವೆಚ್ಚದಲ್ಲಿ ಒಟ್ಟು 343 ಫಲಾನುಭವಿಗಳಿಗೆ 28.82 ಲಕ್ಷಗಳ ವೆಚ್ಚದಲ್ಲಿ ಸಾಧನ ಮತ್ತು ಸಲಕರಣೆಗಳನ್ನು ವಿತರಿಸಲಾಗಿದೆ ಹೇಳಿದರು.
ಈಗಾಗಲೇ ದಾವಣಗೆರೆ ಉತ್ತರ ಮತ್ತು ದಕ್ಷಿಣ ಕ್ಷೇತ್ರ ಮತ್ತು ಮಾಯಕೊಂಡ ಕ್ಷೇತ್ರದಲ್ಲಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಉಳಿದ ವಿಧಾನಸಭಾ ಕ್ಷೇತ್ರಗಳಲ್ಲಿ ಶಿಬಿರಗಳನ್ನು ಆಯೋಜಿಸಿ ಅರ್ಹ ಹಿರಿಯ ನಾಗರಿಕರು ಹಾಗೂ ವಿಕಲಚೇತನರನ್ನು ಆಯ್ಕೆ ಮಾಡಲಾಗುವುದು, ಜಿಲ್ಲೆಯಲ್ಲಿ ಇನ್ನು ಮುಂದೆ ಪ್ರತಿ ವರ್ಷ ಜನವರಿ ಹಾಗೂ ಡಿಸೆಂಬರ್ ಮಾಹೆಗಳಲ್ಲಿ ಕ್ಯಾಂಪನ್ನು ಆಯೋಜಿಸಿ ಅರ್ಹರಿಗೆ ಸಾಧನ ಮತ್ತು ಸಲಕರಣೆಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಅಧಿಕಾರಿ ಪ್ರಕಾಶ್ ಹಾಗೂ ಇತರರು ಉಪಸ್ಥಿತರಿದ್ದರು.



