ದಾವಣಗೆರೆ: ಒಳ ಮೀಸಲಾತಿ ವಿಚಾರವಾಗಿ ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ ಹಾಗೂ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವ ನಾಯ್ಕ ವಿರುದ್ಧ ಲಂಬಾಣಿ ಸಮುದಾಯದ ಜನರು ತೀವ್ರ ಆಕ್ರೋಶ ಹೊರ ಹಾಕಿದರು.
ಪ್ರಮುಖಾಂಶ
- ಒಳಮೀಸಲಾತಿಯಿಂದ ಲಂಬಾಣಿ ಸಮುದಾಯಕ್ಕೆ ಅನ್ಯಾಯ
- ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿರುದ್ಧ ಕಿಡಿ
- ಸಮಾಜದ ಪ್ರತಿನಿಧಿಗಳಾಗಿ ರಾಜ್ಯ ಸರ್ಕಾರದಲ್ಲಿ ಧ್ವನಿ ಎತ್ತಬೇಕಿತ್ತು
- ಅನ್ಯಾಯವಾಗಿದ್ದರೂ ನೀವು ಮುಖ್ಯಮಂತ್ರಿಯವರಿಗೆ ಸನ್ಮಾನ ಯಾಕೆ..?
- ಬಂಜಾರ ಸಮುದಾಯ ಅನ್ಯಾಯ ಬಗ್ಗೆ ಪ್ರಶ್ನೆ ಯಾಕೆ ಮಾಡಿಲ್ಲ…?
ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿರುವ ಬಂಜಾರ ಸಮುದಾಯದ ಶ್ರೀಕ್ಷೇತ್ರ ದೇವಸ್ಥಾನ ಸಮಿತಿ ವಾರ್ಷಿಕ ಮಹಾಸಭೆಗೆ ಆಗಮಿಸಿದ ಸಂದರ್ಭದಲ್ಲಿ ರುದ್ರಪ್ಪ ಲಮಾಣಿ ಹಾಗೂ ಜಯದೇವ ನಾಯ್ಕ ವಿರುದ್ಧ ಸಮುದಾಯದ ಮುಖಂಡರು ಕಿಡಿಕಾರಿದರು.
ಎಸ್ಪಿ ಒಳಮೀಸಲಾತಿ ಜಾರಿಯಿಂದ ಬಂಜಾರ ಸಮುದಾಯದವರಿಗೆ ಅನ್ಯಾಯವಾಗಿದ್ದರೂ ನೀವು ಸಮುದಾಯವರ ಒಪ್ಪಿಗೆ ಇಲ್ಲದೆ ಸಿಎಂಗೆ ಯಾಕೆ ಸನ್ಮಾನ ಮಾಡಿದೀರಿ? ಬಂಜಾರ ಸಮುದಾಯಕ್ಕೆ ಒಳಮೀಸಲಾತಿಯಿಂದ ಆಗಿರುವ ಅನುಕೂಲ ಏನು ಎಂದು ಸ್ಪಷ್ಟಪಡಿಸಬೇಕು ನೀಡಬೇಕು ಜನರು ಪಟ್ಟು ಹಿಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಲು ಇಬ್ಬರು ನಾಯಕರು ನಿರಾಕರಿಸಿದರು.ಲಂಬಾಣಿ ಸಮುದಾಯಕ್ಕೆ ಅನ್ಯಾಯವಾಗಿದೆ. ಸಮಾಜದ ಪ್ರತಿನಿಧಿಗಳಾಗಿ ರಾಜ್ಯ ಸರ್ಕಾರದಲ್ಲಿ ನೀವು ಧ್ವನಿ ಎತ್ತಬೇಕಿತ್ತು. ಅದನ್ನು ನೀವು ಮಾಡಲಿಲ್ಲ ತೀವ್ರ ತರಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ ಕೆಲ ಹೊತ್ತು ವಾಗ್ವಾದ ಉಂಟಾಗಿತ್ತು. ಪೋಲೀಸರು ನಾಯಕರನ್ನು ರಕ್ಷಣೆ ಮಾಡಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.



