Connect with us

Dvgsuddi Kannada | online news portal | Kannada news online

ಪ್ರಧಾನಿ ಕೇದಾರದಲ್ಲಿ‌ ಅದಿ ಕರಚಾರ್ಯರ ಪ್ರತಿಮೆ‌ ಅನಾವರಣ; ಹರಿಹರದಲ್ಲಿ ವಿಶೇಷ ಕಾರ್ಯಕ್ರಮ : ಜಿಲ್ಲಾಧಿಕಾರಿ

FB IMG 1635944493391

ದಾವಣಗೆರೆ

ಪ್ರಧಾನಿ ಕೇದಾರದಲ್ಲಿ‌ ಅದಿ ಕರಚಾರ್ಯರ ಪ್ರತಿಮೆ‌ ಅನಾವರಣ; ಹರಿಹರದಲ್ಲಿ ವಿಶೇಷ ಕಾರ್ಯಕ್ರಮ : ಜಿಲ್ಲಾಧಿಕಾರಿ

ದಾವಣಗೆರೆ: ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರು ನವೆಂಬರ್ 5 ರಂದು ಕೇದಾರನಾಥ ಕ್ಷೇತ್ರದಲ್ಲಿ ಆದಿ ಶಂಕರಾಚಾರ್ಯರ ಪ್ರತಿಮೆ ಅನಾವರಣಗೊಳಿಸುತ್ತಿದ್ದು, ಅಂದು ಶಂಕರಾಚಾರ್ಯರು ಭೇಟಿ ನೀಡಿದ್ದ 12 ಜ್ಯೋತಿರ್ಲಿಂಗ 4 ಜ್ಯೋತಿಷ್ ಪೀಠಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ

ಈ ಹಿನ್ನೆಲೆಯಲ್ಲಿ ರಾಜ್ಯದ 5 ಸ್ಥಳಗಳಿಗೆ ಶಂಕರಾಚಾರ್ಯರು ಭೇಟಿ ನೀಡಿದ್ದ ಸ್ಥಳಗಳಲ್ಲಿ ದಾವಣಗೆರೆ ಜಿಲ್ಲೆಯ ಹರಿಹರ ದ ಹರಿಹರೇಶ್ವರ ದೇವಸ್ಥಾನವೂ ಒಂದಾಗಿದ್ದು ಅಂದು ದೇವಸ್ಥಾನದ ಆವರಣದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು

ಜಿಲ್ಲಾಡಳಿತ ಭವನದಲ್ಲಿಂದು (ನ,3) ನಡೆದ ಅಧಿಕಾರಿಗಳ ಸಭೆ ಯಲ್ಲಿ ಮಾತನಾಡಿದ ಅವರು ನವೆಂಬರ್ 5 ರಂದು ಬೆಳಿಗ್ಗೆ 6,30 ರಿಂದ 9,20 ವರೆಗೆ ಆರತಿ,ವೇದಘೋಷ ಕಾರ್ಯಕ್ರಮ ನಡೆಯಲಿದೆ ನಂತರ ಶಿವತಾಂಡವ,ಅರ್ಧನಾರೀಶ್ವರ ,ಕೀರ್ತನ,ಶಿವಸ್ತುತಿ ಕಾರ್ಯಕ್ರಮಗಳು ಜರುಗಲಿವೆ.

ಪ್ರಧಾನ ಮಂತ್ರಿಗಳು ಕೇದಾರನಾಥದಲ್ಲಿ ಪಾಲ್ಗೊಳ್ಳುವ ಎಲ್ಲಾ ಕಾರ್ಯಕ್ರಮಗಳು ಬೃಹತ್ ಎಲ್.ಇ.ಡಿ.ಪರದೆಯಲ್ಲಿ ನೇರ ಪ್ರಸಾರಗೊಳ್ಳಲಿವೆ,ಸಂಜೆ 5,30 ಕ್ಕೆ ಗೋಪೂಜೆ ನೆರವೇರಲಿದೆ ಅಂದು ಹರಿಹರೇಶ್ವರ ಸ್ವಾಮಿಗೆ ವಿಶೇಷ ಅಲಂಕಾರದೊಂದಿಗೆ ದೇವಸ್ಥಾನದ ಆವರಣದ ವಿಶೇಷ ವೇದಿಕೆಯಲ್ಲಿ ಕಾರ್ಯಕ್ರಮಗಳು ಅನಾವರಣಗೊಳ್ಳಲಿವೆ ಎಂದರು

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಹರಿಹರ ತಹಶೀಲ್ದಾರ್ ರಾಮಚಂದ್ರಪ್ಪ ಹರಿಹರ ಪೌರಾಯುಕ್ತರಾದ ಲಕ್ಷ್ಮಿ ಪುರಾತತ್ವ ಇಲಾಖೆಯ ಸುಧೀರ್, ತಾರಾನಾಥ್,ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಫಾಲಾಕ್ಷ ಹಾಗೂ ಬ್ರಾಹ್ಮಣ ಸಮಾಜದ ಪ್ರತಿನಿಧಿಗಳು ಇದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top