ದಾವಣಗೆರೆ: ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಸರ್ಕಾರಿ ಪರಿಶಿಷ್ಟ ವರ್ಗದ ಮೆಟ್ರಿಕ್ ನಂತರದ ದಾವಣಗೆರೆ-2ರ ಬಾಲಕರ ವಿದ್ಯಾರ್ಥಿ ನಿಲಯಕ್ಕೆ 150 ವಿದ್ಯಾರ್ಥಿಗಳ ವಾಸ್ತವ್ಯಕ್ಕೆ ಹಾಗೂ ಮೆಟ್ರಿಕ್ ಪೂರ್ವ ಬಾಲಕಿಯರ ನಿಟ್ಟುವಳ್ಳಿ ವಿದ್ಯಾರ್ಥಿನಿಲಯಕ್ಕೆ 100 ವಿದ್ಯಾರ್ಥಿಗಳ ವಾಸ್ತವ್ಯಕ್ಕೆ ಅನುಕೂಲವಾಗುವಂತಹ ಸುರಕ್ಷಿತ ಕಟ್ಟಡಗಳ ಅವಶ್ಯಕತೆ ಇರುತ್ತದೆ.
ಮೂಲಭೂತ ಸೌಲಭ್ಯ ಸೌಕರ್ಯವಿರುವ ಕಟ್ಟಡ ಮಾಲೀಕರು ಪಿ.ಡಬ್ಲ್ಯೂಡಿ ಇಲಾಖೆಯವರು ನಿಗದಿಪಡಿಸುವ ಮಾಸಿಕ ಬಾಡಿಗೆ ಆಧಾರದ ಮೇಲೆ ಖುದ್ದಾಗಿ ರಾಂ & ಕೋ ಸರ್ಕಲ್ 4ನೇ ಮೇನ್, ಪಿ.ಜೆ ಬಡಾವಣೆ, ರಾಂ & ಕೋ ಅಂಗಡಿ ಎದುರು ಇರುವ ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ದಾವಣಗೆರೆ ದೂ.ಸಂ:9481064288, 9620249697 ನ್ನು ಸಂಪರ್ಕಿಸಲು ಇಲಾಖೆಯ ಅಧಿಕಾರಿ ನವೀನ್ ಮಠದ್ ತಿಳಿಸಿದ್ದಾರೆ.



