ದಾವಣಗೆರೆ: ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರು ಸಂಚಾರ ನಿಯಮಗಳ ಕಟ್ಟುನಿಟ್ಟಿನ ಪಾಲನೆ ಸೇರಿದಂತೆ ಅಪಘಾತ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಲು ಸತತ ಪ್ರಯತ್ನ ಮಾಡುತ್ತಿದ್ದು, ಇಂದು (ಜು.8) ಬೆಳ್ಳಂಬೆಳಗ್ಗೆ ರಸ್ತೆಗಿಳಿದು 30ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದು ಸಂಚಾರಿ ದಕ್ಷಿಣ ವಲಯ ಠಾಣೆಗೆ ಹಸ್ತಾಂತರಿಸಿದರು.
ಎಲ್ಲೆಲ್ಲಿ ದಾಳಿ.?
ಬೆಳಗ್ಗೆ 6 ರಿಂದ ಮಧ್ಯಾಹ್ನದ 12 ಗಂಟೆಯವರೆಗೆ ಡೆಂಟಲ್ ಕಾಲೇಜು ರಸ್ತೆ, ಬಾಯ್ಸ್ ಹಾಸ್ಟೆಲ್, ಕ್ರೀಡಾ ನಿಲಯ, ಎಂಸಿಸಿ `ಬಿ` ಬ್ಲಾಕ್, ಶಾಮನೂರು ವರ್ತುಲ ರಸ್ತೆಯಲ್ಲಿ ಮಿಂಚಿನ ಸಂಚಾರ ಕೈಗೊಳ್ಳಲಾಯಿತು.
ದಾವಣಗೆರೆ: ಬಸ್ ನಿಲ್ದಾಣದಲ್ಲಿ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಮಹಿಳಾ ಆರೋಪಿಗಳ ಬಂಧನ; 15 ಲಕ್ಷ ಮೌಲ್ಯದ ಚಿನ್ನಾಭರಣ ವಶ
ಕೆಲವು ಕಾಲೇಜಿನ ವಿದ್ಯಾರ್ಥಿಗಳು ದ್ವಿಚಕ್ರವಾಹನಕ್ಕೆ ನಂಬರ್ ಪ್ಲೇಟ್ ಇಲ್ಲದೇ ವಾಹನ ಚಲಾಯಿಸುತ್ತಿರುವುದು ಮತ್ತು ವಯಸ್ಕರು ಕೂಡ ವಾಹನದ ನಂಬರ್ ಪ್ಲೇಟ್ ಇಲ್ಲದೇ ವಾಹನ ಚಲಾಯಿಸುತ್ತಿರುವುದನ್ನು ಪತ್ತೆಹಚ್ಚಿ, ಅಂತಹ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ರಾಜ್ಯ ಪೊಲೀಸ್ ವಾರ್ಷಿಕ ಕ್ರೀಡಾಕೂಟ; ದಾವಣಗೆರೆ ಪೂರ್ವ ವಲಯದ ಪುರುಷರ ಕಬಡ್ಡಿ ತಂಡಕ್ಕೆ ದ್ವಿತೀಯ ಸ್ಥಾನ
ನ್ಯಾಯಾಲಯದ ಮೂಲಕ ನೋಟಿಸ್
ವಾಹನದ ನಂಬರ್ ಪ್ಲೇಟ್ ಇಲ್ಲದೇ ಚಲಾಯಿಸುವುದು ಮೋಟಾರ್ ವಾಹನ ಕಾಯಿದೆಯ ಸೆಕ್ಷನ್ 177 ಉಲ್ಲಂಘನೆಯಾಗಿದ್ದು ದಂಡ ಹಾಕಲಾಗಿದೆ. ವಾಹನಗಳಿಗೆ ಕಾನೂನು ಬದ್ಧತೆ, ಗುರುತು ಮತ್ತು ಭದ್ರತೆಗೆ ಸಂಬಂಧಿಸಿದಾಗಿದ್ದು ಪ್ರತಿಯೊಂದು ವಾಹನದ ಗುರುತಿಗಾಗಿ ಮತ್ತು ಅಪರಾಧಗಳಲ್ಲಿ ಬಳಸುವ ವಾಹನ ಗುರುತಿಗಾಗಿ ಮತ್ತು ಸಂಚಾರಿ ನಿಯಮಗಳ ಉಲ್ಲಂಘನೆ ಪತ್ತೆ, ಕಳ್ಳತನ ಪತ್ತೆಹಚ್ಚಲು ಪ್ರತಿ ವಾಹನದ ನಂಬರ್ ಪ್ಲೇಟ್ ಸಹಾಯಕವಾಗಿದ್ದು ಪ್ರತಿ ವಾಹನಗಳಲ್ಲಿ ನಂಬರ್ ಪ್ಲೇಟ್ ಅಳವಡಿಕೆ ಕಾನೂನುಬದ್ದವಾಗಿದೆ. ಆದರೆ ನಂಬರ್ ಪ್ಲೇಟ್ ಇಲ್ಲದೇ ವಾಹನಗಳನ್ನು ಬಳಸುತಿದ್ದು ಈ ವಾಹನಗಳ ಮಾಲಿಕರಿಗೆ ನ್ಯಾಯಾಲಯದ ಮೂಲಕ ನೋಟಿಸ್ ನೀಡಲು ಸೂಚನೆ ನೀಡಿದರು.